ಸುಂದರ ಪರಿಸರದಿಂದ ಸಕಾರಾತ್ಮಕ ಆಲೋಚನೆ ಸಾಧ್ಯ

swachate
ಯಲಬುರ್ಗಾದ ಕೋರ್ಟ್ ಆವರಣದಲ್ಲಿ ರಾಷ್ಟ್ರೀಯ ಹುತಾತ್ಮರ ದಿನ ಅಂಗವಾಗಿ ಮೌನ ಆಚರಣೆ ಮಾಡಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ವಕೀಲರ ಸಂಘದ ಉಪಾಧ್ಯಕ್ಷ ಎಚ್.ಎಚ್.ಹಿರೇಮನಿ, ಪಪಂ ಮುಖ್ಯಾಧಿಕಾರಿ ನಾಗೇಶ, ವಕೀಲರಾದ ಎಸ್.ಎನ್.ಶ್ಯಾಗೋಟಿ, ಎ.ಎಂ.ಶಂಕರಗೌಡ್ರ, ದಾದು ಎಲಿಗಾರ ಇದ್ದರು.
Published on

ಯಲಬುರ್ಗಾ: ಸ್ವಚ್ಛ ಪರಿಸರದಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಹುತಾತ್ಮರ ಹಾಗೂ ಸ್ವಚ್ಛತಾ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಮನೆ ಸುತ್ತಲಿನ ವಾತಾವರಣ ಸ್ವಚ್ಛವಿಲ್ಲದಿದ್ದರೆ ಸಾಂಕ್ರಾಮಿಕ ರೋಗಗಳು ಹರಡಿ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಸುಂದರ ಪರಿಸರದಿಂದ ಆರೋಗ್ಯದ ಜತೆಗೆ ಸಕಾರಾತ್ಮಕ ಆಲೋಚನೆಗಳು ಬೆಳೆಯಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ವಕೀಲರ ಸಂಘದ ಉಪಾಧ್ಯಕ್ಷ ಎಚ್.ಎಚ್.ಹಿರೇಮನಿ, ಪಪಂ ಮುಖ್ಯಾಧಿಕಾರಿ ನಾಗೇಶ, ವಕೀಲರಾದ ಎಸ್.ಎನ್. ಶ್ಯಾಗೋಟಿ, ಜಿ.ಕೆ.ಲಾಲಗೊಂಡರ್, ಎ.ಎಂ. ಶಂಕರಗೌಡ್ರ, ಸಂಗಮೇಶ ವಾದಿ, ದಾದುಸಾಬ್ ಎಲಿಗಾರ, ಭರಮಗೌಡ್ರ, ನಾಗರಾಜ, ಎಸ್.ವಿ.ಶಶಿಮಟ, ಕೆ.ಆರ್.ಬೆಟಗೇರಿ, ಎ.ಎಂ.ಪಾಟೀಲ್, ಶಶಿಧರ ಶ್ಯಾಗೋಟಿ, ಎಚ್.ಎ. ನಡುಲಮನಿ, ಮಂಜುನಾಥ, ನದಾಫ್, ನ್ಯಾಯಲಯ ಹಾಗೂ ಪಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net