

ಕಾರವಾರ:ಮೇರಾ ಯುವ ಭಾರತ (ನೆಹರು ಯುವ ಕೇಂದ್ರ) ಕಾರವಾರದ ವತಿಯಿಂದ
ಅ.2 ರಂದು ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನದ ಅಂಗವಾಗಿ ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿರುವ ಸುರಭಿ
ವೃದ್ದಾಶ್ರಮಕ್ಕೆ ಮೇರಾ ಯುವ ಭಾರತದ (ನೆಹರು ಯುವ ಕೇಂದ್ರ) ಉಪನಿದೇಶಕ ಲೋಕೇಶಕುಮಾರ ಭೇಟಿ ನೀಡಿ ಹಿರಿಯರಿಗೆ ಹಣ್ಣು
ಹಂಪಲುಗಳನ್ನು ವಿತರಿಸಿದರು.
ವೃದ್ದಾಶ್ರಮದಲ್ಲಿ ಸುಮಾರು 36 ಮಂದಿ ಹಿರಿಯರು ಇದ್ದು, ವೃದ್ದಾಶ್ರಮದಲ್ಲಿರುವ ಹಿರಿಯ ನಾಗರಿಕರ
(ತಮ್ಮವರಿಂದ ಪರಿತ್ಯಕ್ತರಾದ) ಜೊತೆಯಲ್ಲಿ ಯುವಜನರು ತಮ್ಮನ್ನು ಪರಿಚಯಿಸಿಕೊಂಡು ಅವರ ಜೀವನದ ಕಥೆಯನ್ನು ಅಲಿಸಿ,
ಅವರೊಂದಿಗೆ ಕೆರಮ್ ಆಟವಾಡಿದರು, ಹಿರಿಯರು ಹಾಡು ಹೇಳಿ ಯುವಜನರ ಜೊತೆಯಲ್ಲಿ ಕುಣಿದು ಮನರಂಜನೆಯನ್ನು ನೀಡಿದರು.
ಸರಕಾರಿ ಕಲಾ ಮತ್ತು ವಿಜ್ಘಾನ ಮಹಾವಿದ್ಯಾಲಯ ಕಾರವಾರ ಹಾಗೂ ಶಿವಾಜಿ ಬಿ ಎಡ್, ಮಹಾವಿದ್ಯಾಲಯ ಬಾಡ,
ಕಾರವಾರ ಕಾಲೇಜಿನಿಂದ ಸುಮಾರು 16 ಯುವ ಮಿತ್ರರು (ಮೇರಾ ಯುವ ಭಾರತ ಕಾರ್ಯಕರ್ತರು) ಈ ಕಾರ್ಯಕ್ರಮದಲ್ಲಿ
ಪಾಲ್ಗೊಂಡಿದ್ದರು.
ಸ್ವಸ್ತಿಕಾ ಮಹಾಲಕ್ಷಮೀಕರ ಕಾರವಾರ ಇವರು ಹಿರಿಯರ ಮಾನಸಿಕ ಸ್ಥಿತಿಯನ್ನು ಸಮಾಲೋಚನೆ ಮಾಡಿದರು,
ಸುರಭಿ ವೃದ್ದಾಶ್ರಮದ ಅಡುಗೆಯವರಾದ ಜಾಹ್ನವಿ , ಉಷಾ ಮತ್ತು ವಿವೇಕ ರಾಣೆ ಶೋಶಿಯಲ್ ವರ್ಕರ ಇವರು ಸಹಕರಿಸಿದರು.
ಲೆಕ್ಕಾಧಿಕಾರಿ ಮೀರಾ ನಾಯ್ಕ, ಶಿವಂ ನಾಯ್ಕ, ಯುವ ನೀತಿ, ಜಿಲ್ಲಾ ಪಂಚಾಯತ ಕಾರವಾರ, ಶಿವಪ್ರಸಾದ, ಫಹದ,
ಪರಮಾನಂದ, ಅಬ್ದುಲ, ಯಶೋದಾ ಮುಂತಾದವರು ಪಾಲ್ಗೊಂಡಿದ್ದರು.