ಹುಬ್ಬಳ್ಳಿ: ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘವು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ನವೆಂಬರ್ 18ರಂದು ಬೆಳಗ್ಗೆ 11ಕ್ಕೆ ಸುಮಧುರ ಕನ್ನಡ ಚಲನಚಿತ್ರ ಕನ್ನಡ ಗೀತೆ ಹಾಡುವ ಸ್ಪರ್ಧೆ ಏರ್ಪಡಿಸಲಾಗಿದೆ.
ಆಸಕ್ತ ಹಿರಿಯರು ನವೆಂಬರ್ 17ರೊಳಗೆ ತಮ್ಮ ಹೆಸರನ್ನು ನಗರದ ಹೊಸೂರಿನಲ್ಲಿರುವ ಸಂದ ಹಿರಿಯ ನಾಗರಿಕರ ಕಚೇರಿಯಲ್ಲಿ ನೋಂದಾಯಿಸಲು ಕೋರಲಾಗಿದೆ.
ಸಂಘದ ಕಚೇರಿ ಹಿರಿಯರ ಹೆಜ್ಜೆ ವೇದಿಕೆಯಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಅದೇ ದಿನ ಸಂಜೆ 4ಕ್ಕೆ ಆಯೋಜಿಸಿರುವ ಸಂದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವದು. ಹೆಚ್ಚಿನ ಮಾಹಿತಿಗೆ ಸಂದ ರಾಜ್ಯಾಧ್ಯ ಬಿ.ಎ. ಪಾಟೀಲ ಅವರನ್ನು ಸಂಪಕಿರ್ಸಬಹುದು.