ಬಜೆಟ್‌ನಲ್ಲಿ ಹಿರಿಯ ನಾಗರಿಕರ ಅಸಡ್ಡೆ: ಆರೋಪ

Published on

ಮೈಸೂರು: ಕೇಂದ್ರ ಬಜೆಟ್‌ನಲ್ಲಿ ಹಿರಿಯ ನಾಗರಿಕರ ಬಗ್ಗೆ ಅಸಡ್ಡೆ ತೋರಲಾಗಿದೆ. ವಿಶೇಷವಾದ ಯಾವುದೇ ಯೋಜನೆ ಇಲ್ಲ ಎಂದು ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘ (ಎನ್‌ಜಿಒ)ದ ಉಪಾಧ್ಯಕ್ಷ ಬಿ.ಆರ್.ಉಮಾಕಾಂತ್ ದೂರಿದ್ದಾರೆ.

ಬಜೆಟ್‌ನಲ್ಲಿ ವೇತನದಾರರ ಹಿತ ಕಾಯಲಾಗಿದೆಯೇ ವಿನಾ, ವೇತನವೇ ಇಲ್ಲದ ಹಿರಿಯ ನಾಗರಿಕರು, ರೈತರು, ವಿದ್ಯಾರ್ಥಿಗಳು, ಬೀದಿ ಬದಿ ವ್ಯಾಪಾರಿಗಳು, ವರ್ತಕರು, ಕೂಲಿಕಾರ್ಮಿಕರಿಗಾಗಿ ವಿಶೇಷ ಯಾವುದೇ ಘೋಷಣೆಗಳು ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋವಿಡ್‌ಗಿಂತ ಹಿಂದೆ ರೈಲಿನ ಪ್ರಯಾಣದಲ್ಲಿ ಇದ್ದ ವಿಶೇಷ ರಿಯಾಯಿತಿಯನ್ನು ಮರು ಜಾರಿಗೊಳಿಸಿಲ್ಲ. ಬಡವರಿಗೆ ರೈಲಿನ ಪ್ರಯಾಣವೇ ಆಧಾರವಾಗಿರುವಾಗ ಅದನ್ನು ಮರಳಿ ಜಾರಿಗೊಳಿಸಬೇಕು, ಆರೋಗ್ಯ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net