

ಬೈಂದೂರು: ಶಿರೂರು ಹಿರಿಯ ನಾಗರಿಕರ ವೇದಿಕೆಯ ಪ್ರಸಕ್ತ ಸಾಲಿನ ಮಹಾಸಭೆ ಶನಿವಾರ ನಡೆಯಿತು. ಮಣಿಪಾಲ ಮಾಹೆ ಸಹಾಯಕ ಉಪನ್ಯಾಸಕ ರಾಘವೇಂದ್ರ ಜಿ. ಸೈಬರ್ ಜಾಗೃತಿ ಬಗ್ಗೆ ಉಪನ್ಯಾಸ ನೀಡಿದರು. ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಎಚ್, ಉಪಾಧ್ಯಕ್ಷರಾಗಿ ಎಸ್. ಪ್ರಕಾಶ ಪ್ರಭು, ಹುಂಚನಿ ಕೃಷ್ಣಪ್ಪ ಶೆಟ್ಟಿ, ಕಾರ್ಯದರ್ಶಿ ಶಾಂತಾನಂದ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಖಾಜಿ ಅಬ್ದುಲ್ ರೆಹಮಾನ್, ರತ್ನಾಕರ ಮೇಸ್ತ, ಖಜಾಂಚಿ ದಾಮೋದರ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಶ್ವನಾಥ್ ಹೆಗ್ಡೆ, ಕರಾಣೆ ಮೊಹಿದ್ದಿನ ಸಾಹೇಬ್, ಚಂದ್ರ ಮೊಗವೀರ, ರಾಮದಾಸ ಮೇಸ್ತ ಅವರನ್ನು ಆಯ್ಕೆ ಮಾಡಲಾಯಿತು.