ಹಿರಿಯ ನಾಗರಿಕರಿಂದ ವೈದ್ಯರ ದಿನಾಚರಣೆ

New SN New
Published on

ಹುಬ್ಬಳ್ಳಿ : ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಇಲ್ಲಿನ ಹಿರಿಯ ನಾಗರಿಕರ ಕಚೇರಿಯ ಹಿರಿಯರ ಹೆಜ್ಜೆ ವೇದಿಕೆಯಲ್ಲಿ ಹಿರಿಯ ನಾಗರಿಕರ ಆರೋಗ್ಯ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ ಮಹೇಶ ಗಸ್ತೆ, ಹಿರಿಯ ನಾಗರಿಕರು ಕಾನೂನು ಪ್ರಕಾರ ಇರುವ ಸೌಲಭ್ಯಗಳನ್ನು ಪಡೆಯಬೇಕು ಎಂದರು.

ಬೈಲಹೊಂಗಲ ತಾಲೂಕಿನ ನಿವೃತ್ತ ಜಿಲ್ಲಾ ಸರ್ಜನ್ ಡಾ. ಎ.ಎನ್. ಬಾಳಿ, ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ಸರ್ಜನ್ ಡಾ. ವೆಂಕಟರಾಮ ಕಟ್ಟಿ, ಕೆಎಂಸಿಆರ್​ಐ ನ ಡಾ. ಶೋಭಾ ಕಡಕೋಳ ಅವರು ಸನ್ಮಾನ ಸ್ವೀಕರಿಸಿ, ಮಾತನಾಡಿದರು.

ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತೆ ಡಾ. ಸುನಂದಾ ಬೆನ್ನೂರ ಅವರನ್ನು ಸನ್ಮಾನಿಸಲಾಯಿತು. ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net