ಹುಬ್ಬಳ್ಳಿ: ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಜೀವನ ಗೌರವ ಅಭಿಯಾನ ರಾಜ್ಯ ಸಮಿತಿಯ ಪರವಾಗಿ ಡಿ. 21ರಂದು ಮಧ್ಯಾಹ್ನ 3ಕ್ಕೆ ಇಲ್ಲಿಯ ಹೊಸೂರ ಸಂಘದ ಕಚೇರಿಯಲ್ಲಿ ಹಿರಿಯ ನಾಗರಿಕರ ಜೀವನ ಗೌರವ ಕನ್ನಡ ಕೈಪಿಡಿ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ.
ಶಾಸಕ ಎಸ್.ವಿ. ಸಂಕನೂರ ಕಾರ್ಯಕ್ರಮ ಉದ್ಘಾಟಿಸುವರು. ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಕೈಪಿಡಿ ಬಿಡುಗಡೆ ಮಾಡುವರು.
ವಾರ್ಡ್ ಕಮೀಟಿ ಬಳಗದ ಸಂಚಾಲಕ ಶಿವಾನಂದ ಬೆಳವಟಗಿ, ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಉಪಸ್ಥಿತರಿರುವರು.