ಹಿರಿಯ ನಾಗರಿಕರ ಜಾಗೃತಿ ಸಮಾವೇಶ

senior rtd
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ನವನಗರ ಶಾಖೆಯ ವಾರ್ಷಿಕೋತ್ಸವ ಸಮಾರಂಭ, ಹಿರಿಯ ನಾಗರಿಕರ ಜಾಗೃತಿ ಸಮಾವೇಶ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜೂ.24ರಂದು ಬೆಳಗ್ಗೆ 11ಗಂಟೆಗೆ ನವನಗರ ಚಿಕೇನಕೊಪ್ಪ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ನಡೆಯಲಿದೆ ಎಂದು ಸಂಘದ ನವನಗರ ಶಾಖೆ ಅಧ್ಯಕ್ಷ ಶೇಖರ ಹುಬ್ಬಳ್ಳಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸುವರು. ನನ್ನ ಸಂಪಾದಕತ್ವದಲ್ಲಿ ರಚಿತಗೊಂಡ ಸಿರಿ ಕನ್ನಡ ನಾಡು-ನುಡಿ ವೈಭವ ಪುಸ್ತಕವನ್ನು ಧಾರವಾಡ ಸಿಎಸ್​ಐ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ ಲೋಕಾರ್ಪಣೆ ಮಾಡುವರು. ಅತಿಥಿಗಳಾಗಿ ವೈದ್ಯ ಡಾ. ಎಂ.ಐ. ರಡ್ಡೇರ, ಶಿವಪ್ಪ ನೀರಾವರಿ, ಬಿ.ಎಸ್. ಮಾಳವಾಡ, ಎಚ್.ಟಿ. ಪವಾರ, ಸುನಂದಾ ಪವಾರ ಪಾಲ್ಗೊಳ್ಳುವರು. ವಿಶೇಷ ಆಮಂತ್ರಿತರಾಗಿ ಡಾ. ರಾಮು ಮೂಲಗಿ ಭಾಗವಹಿಸುವರು ಎಂದು ಹೇಳಿದರು.

ಗುರುಸಿದ್ದಪ್ಪ ಬಡಿಗೇರ, ಡಾ. ಎಸ್.ಎಸ್. ಏರಿಮನಿ, ಜಿ.ಜಿ. ಹೆಗಡೆ, ಬಸಪ್ಪ ಹುಬ್ಬಳ್ಳಿ, ಗಂಗಪ್ಪ ಶಿರೂರ, ಆರ್.ಡಿ. ಹಕಾರಿ, ಎ.ಬಿ. ಪಾಟೀಲ, ಪ್ರೊ. ಮದನ ದೊಡಮನಿ, ವಿ.ಎ. ಪೂಜಾರ ಹಾಗೂ ಬಸವರಾಜ ಕಿತ್ತೂರ ಅವರನ್ನು ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ನವನಗರ ಶಾಖೆಯ ಉಪಾಧ್ಯಕ್ಷ ಜಿ.ಎಂ. ಗೋಣಿ, ಕಾರ್ಯದರ್ಶಿ ಯಲ್ಲಪ್ಪ ಶಿಸನಳ್ಳಿ, ಎಂ.ವೈ.ಜಯಪ್ಪನವರ, ಸುರೇಶ ಗಡಾದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net