ಹಿರಿಯ ನಾಗರಿಕರು ಅನುಭವ ಜನ್ಯ ಸಂಸತಿಯ ವಾಹಕರು

Senior citizens are the carriers of an experienced parliament.
ವಿಜಯಪುರದ ಅಖಿಲ ಭಾರತ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರೋಟರಿ ಪ್ರೋಬಸ್​ ಕ್ಲಬ್​ ಸಭೆಯಲ್ಲಿ ಡಾ. ಎಸ್​.ಎಂ.ತಿಮ್ಮಾಪುರ ಮಾತನಾಡಿದರು. ಶಾರದಾ ಐಹೊಳ್ಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ಹಿರಿಯ ನಾಗರಿಕರು ತಮ್ಮ ಹಿಂದಿನ ಅನುಭವ, ಸದ್ಯದ ಆಗು ಹೋಗುಗಳ ಬಗ್ಗೆ ಅರಿತು ಮುಂದಿನ ಬದುಕು ಹೇಗೆ ಎಂಬುದನ್ನು ಪೂರ್ವಭಾವಿಯಾಗಿ ಚರ್ಚಿಸಿಕೊಂಡರೆ ಶಾರೀರಿಕ ಹಾಗೂ ಮಾನಸಿಕವಾಗಿ ಸ್ವಾಸ್ಥದಿಂದರಲೂ ಸಾಧ್ಯ ಎಂದು ಉಪಮುಖ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್​.ಎಂ.ತಿಮ್ಮಾಪುರ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಜಯಪುರ (ಉತ್ತರ) ರೋಟರಿ ಪ್ರೋಬಸ್​ ಕ್ಲಬ್​ ಸಭೆಯಲ್ಲಿ ಮಾತನಾಡಿದ ಅವರು, ಹಿರಿಯರು ನಮ್ಮ ಸಂಸತಿಯ ವಾರಸುದಾರರು ಎಂದರು.

ಸದ್ಯ ಯಾವುದೇ ವಯಸ್ಸಿನಲ್ಲಿಯೂ ಹೃದಯಾಘಾತ, ಪಾರ್ಶ್ವವಾಯು ಮತ್ತು ಮೂತ್ರರೋಗ ಬರಬಹುದು. ಹಿರಿಯ ಜೀವಿಗಳು ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಧಾರ್ಮಿಕ ಕ್ಷೇತ್ರ ಸೇರಿದಂತೆ ಎಲ್ಲಿಯೇ ಪ್ರವಾಸಕ್ಕೆ ಹೋದರೂ ಆರೋಗ್ಯದ ಕಾಳಜಿ ವಹಿಸಬೇಕು ಎಂದರು.

ಶಾರದಾ ಐಹೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಎಂ.ಐ. ಬಿರಾದಾರ ವಚನ ಗಾಯನ ಮಾಡಿದರು. ಚಂದ್ರಶೇಖರ ಮೋಟಗಿ ಸ್ವಾಗತಿಸಿ ಪರಿಚಯಿಸಿದರು. ಮಹಾದೇವ ಹಾಲಳ್ಳಿ ನಿರೂಪಿಸಿದರು. ಸುವರ್ಣಾ ತೇಲಿ ವಂದಿಸಿದರು.

ವಿ.ಸಿ. ನಾಗಠಾಣ, ಎಸ್​.ಜಿ. ನಾಡಗೌಡ, ಡಾ. ವಿ.ಡಿ. ಐಹೊಳ್ಳಿ, ವಿಠಲ ತೇಲಿ, ಸಂಗಮೇಶ ಶಿವಣಗಿ, ಎಸ್​.ಬಿ. ದೊಡಮನಿ, ಡಾ. ಕವಿತಾ, ಭಾರತಿ ಜೋಗೂರ, ಬಿ.ಎಸ್​. ಬಿರಾದಾರ, ಎಸ್​.ಎಸ್​. ಪಾಟೀಲ, ಸುಭಾಸ ಯಾದವಾಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net