ಆಧ್ಯಾತ್ಮಿಕ ಶಕ್ತಿಯಿಂದ ಆರೋಗ್ಯ ಗಳಿಸಿ

SENIOR CITIZEN DAY CELEBRATION KOPPAL HEALTH
ಕೊಪ್ಪಳದ ಈಶ್ವರೀಯ ವಿವಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೃದ್ಧರ ಸಮಗ್ರ ಆರೈಕೆ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು.ಡಾ.ಮಹೇಶ್ ಹೇಮಾದ್ರಿ, ಹಿರಿಯರಾದ ವಿಮಲಾ ಇನಾಮದಾರ, ಛತ್ರಪ್ಪ ನಾಗಲಾಪುರ, ರೇಣುಕಾದೇವಿ ನಾಗಲಾಪುರ, ಬಸವರಾಜ್ ಲಾಡಿ, ಶಿವಪ್ಪ ಶೆಟ್ಟರ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಬಿ.ಕೆ.ಸ್ನೇಹಾ ಇದ್ದರು.
Published on

ಕೊಪ್ಪಳ:ಪ್ರತಿಯೊಬ್ಬರು ಆಧ್ಯಾತ್ಮಿಕ ಶಕ್ತಿಯಿಂದ ಆತ್ಮಶಕ್ತಿ ಜಾಗೃತಗೊಳಿಸಿಕೊಂಡು ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ, ಭಾವನಾತ್ಮಕ ಆರೋಗ್ಯ ಸದೃಢಗೊಳಿಸಿಕೊಳ್ಳಿ ಎಂದು ರಾಜಸ್ಥಾನ ಮೌಂಟ್ ಅಬು ಗ್ಲೋಬಲ್ ಹಾಸ್ಪಿಟಲ್ನ ಡಾ.ಮಹೇಶ್ ಹೇಮಾದ್ರಿ ಸಲಹೆ ನೀಡಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಸೋಮವಾರ ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವೃದ್ಧರ ಸಮಗ್ರ ಆರೈಕೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯ ನಾಗರಿಕರಿಗೆ ಬರುವ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು. ವೃದ್ಧಾಪ್ಯದಲ್ಲಿ ಧ್ಯಾನದ ಮಹತ್ವ ತಿಳಿಸಿದರು. ಮನಸ್ಸು ಮತ್ತು ದೇಹವನ್ನು ಶಕ್ತಿಶಾಲಿಯಾಗಿಸಿ ವೃದ್ಧತ್ವ ನಿಲ್ಲಿಸುವ ಧ್ಯಾನ ಪದ್ಧತಿ ನಿರೂಪಿಸಿದರು.

ವಿಶೇಷ ಆಕರ್ಷಣೆ ಯೋಗ ಪರಿಣಿತೆ ಬ್ರಹ್ಮಕುಮಾರಿ ಕವಿತಕ್ಕ ಹಿರಿಯ ನಾಗರಿಕರಿಗೆ ಭಿನ್ನ ವ್ಯಾಯಾಮ ಪ್ರಾಯೋಗಿಕವಾಗಿ ಪ್ರದರ್ಶಿಸಿದರು. ಸಂಸದ ಸಂಗಣ್ಣ ಕರಡಿ, ಅಕ್ಕ ಯೋಗಿನಿ ಮಾತನಾಡಿದರು.

ವಿವಿಧ ಕ್ಷೇತ್ರದ ಹಿರಿಯರಿಗೆ ಸನ್ಮಾನಿಸಲಾಯಿತು. ಹಿರಿಯರಾದ ವಿಮಲಾ ಇನಾಮದಾರ, ಛತ್ರಪ್ಪ ನಾಗಲಾಪುರ, ರೇಣುಕಾದೇವಿ ನಾಗಲಾಪುರ, ಬಸವರಾಜ್ ಲಾಡಿ, ಶಿವಪ್ಪ ಶೆಟ್ಟರ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಬಿ.ಕೆ.ಸ್ನೇಹಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net