

ಕುಮಟಾ: ಪಟ್ಟಣದ ನಾದಶ್ರೀ ಕಲಾ ಕೆಂದ್ರದಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷಶನಲ್ ಸಂಸ್ಥೆಯ ಅಧ್ಯಕ್ಷ ಚೈತ್ರಕುಮಾರ ಅಧಿಕೃತ ಭೇಟಿ ನೀಡಿ ಸಂಘಟನೆಯ ಉದ್ದೇಶ ವಿವರಿಸಿ ಮುಂಬರುವ ಕಾರ್ಯಯೋಜನೆಗಳ ಕುರಿತು ಚರ್ಚಿಸಿದರು.
ಸಂಘಟನೆ ನೂತನ ಸದಸ್ಯರಾದ ಗಣೇಶ ಭಟ್, ಎಸ್. ವಿ.ಹೆಗಡೆ, ಸುರೇಶ್ ಭಟ್ ಅವರನ್ನು ವಿಧ್ಯುಕ್ತವಾಗಿ ಸ್ವಾಗತಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷ ಹುಸೇನ್ ಹೈಕಾಡಿ, ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ, ಸಂಘಟನೆಯ ವಿವಿಧ ಜವಾಬ್ದಾರಿ ಮತ್ತು ಕಾರ್ಯವ್ಯವಸ್ಥೆಯನ್ನು ವಿವರಿಸಿದರು.
ರಾಷ್ಟ್ರೀಯ ಸಂಯೋಜಕಿ ಪುಷ್ಪಾ ಅವರು ಸಂಘಟನೆಯ ಯಶಸ್ಸಿಗೆ ಎಲ್ಲರ ಪ್ರೋತ್ಸಾಹ ಮತ್ತು ಸಹಕಾರ ಯಾಚಿಸಿದರು.
ಸೀನಿಯರ್ ಛೇಂಬರ್‌ನ ಕುಮಟಾ ಘಟಕದ ಅಧ್ಯಕ್ಷ ಆರ್.ಜಿ.ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಘಟಕದ ಅಧ್ಯಕ್ಷ ಯೂಸುಫ್, ಮಾಜಿ ಅಧ್ಯಕ್ಷ ಚಂದ್ರಅಮಿನ್, ಸದಸ್ಯ ವಸಂತ ರಾವ ಇನ್ನಿತರರು ಇದ್ದರು. ಕಾರ್ಯದರ್ಶಿ ಸುನಿಲ ಭಟ್ಟ, ಖಜಾಂಚಿ ಶ್ರೀಕಾಂತ ಭಟ್ಟ ಪದಗ್ರಹಣ ನಡೆಯಿತು.
ಶ್ರೀಕಾಂತ ಭಟ್ಟ ತರಂಗ ಅತಿಥಿಗಳನ್ನು ಪರಿಚಯಿಸಿದರು. ತೆರಿಗೆ ವಕೀಲ ಜಿ. ಎಸ್. ಹೆಗಡೆ ಸ್ವಾಗತಿಸಿದರು. ಗಣೇಶ ಭಟ್ಟ ಧನ್ಯವಾದ ಸಮರ್ಪಿಸಿದರು.