ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಾಜ್ಯ ಮಟ್ಟದ ಕಾರ್ಯಾಗಾರ

mng- june 23- Mallikatte workshop
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಆತಿಥ್ಯದಲ್ಲಿ ಮಲ್ಲಿಕಟ್ಟೆ ಲಯನ್ಸ್ ಸೇವಾ ಭವನದಲ್ಲಿ ಭಾನುವಾರ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಒಂದು ದಿನದ ದೀಕ್ಷಾ ಪಿ ಎಸ್ ಟಿ ತರಬೇತಿ ಕಾರ್ಯಾಗಾರದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ರಾಷ್ಟೀಯ ಅಧ್ಯಕ್ಷ ಚಿತ್ರ ಕುಮಾರ್, ಆಡಳಿತ ವಿಭಾಗ ರಾಷ್ಟ್ರೀಯ ನಿರ್ದೇಶಕ ನವೀನ್ ಅಮೀನ್, ಮುಖ್ಯ ತರಬೇತಿದಾರ ಡಾ.ಕೇದಿಗೆ ಅರವಿಂದ ರಾವ್, ಎಸ್‌ಸಿಐ ರಾಷ್ಟ್ರೀಯ ಕಾನೂನು ಸಲಹೆಗಾರ ನಾಗೇಶ್, ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಕಿಶೋರ್ ಫರ್ನಾಂಡಿಸ್, ಬಿ. ಹುಸೇನ್ ಹೈಕಾಡಿ, ಪುಷ್ಪಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
Published on

ಮಂಗಳೂರು: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಆತಿಥ್ಯದಲ್ಲಿ ರಾಜ್ಯ ಮಟ್ಟದ ಒಂದು ದಿನದ ದೀಕ್ಷಾ ಪಿ ಎಸ್ ಟಿ ತರಬೇತಿ ಕಾರ್ಯಾಗಾರ ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ರಾಷ್ಟೀಯ ಅಧ್ಯಕ್ಷ ಚಿತ್ರ ಕುಮಾರ್ , ರಾಜ್ಯದ ವಿವಿಧ ಪ್ರಾದೇಶಿಕ ಘಟಕಗಳ ಪರಿಚಯ ಮತ್ತು ಸಾಧನೆ ಬಗ್ಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ಆಂಧ್ರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಘಟಕಗಳ ವಿಸ್ತರಣೆ ಬಗ್ಗೆ ಅವರು ತಿಳಿಸಿದರು.

ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಒಂದಾದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಪಿಪಿಎಫ್ ದೇಣಿಗೆ ನೀಡಿದ ಘಟಕದ ಸದಸ್ಯರಿಗೆ ಗೌರವಿಸಿದರು.

ಸಂಸ್ಥೆಯ ಆಡಳಿತ ವಿಭಾಗ ರಾಷ್ಟ್ರೀಯ ನಿರ್ದೇಶಕ ನವೀನ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮುಖ್ಯ ತರಬೇತಿದಾರ ಡಾ.ಕೇದಿಗೆ ಅರವಿಂದ ರಾವ್, ಎಸ್‌ಸಿಐ ರಾಷ್ಟ್ರೀಯ ಕಾನೂನು ಸಲಹೆಗಾರ ನಾಗೇಶ್, ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಕಿಶೋರ್ ಫರ್ನಾಂಡಿಸ್, ಬಿ. ಹುಸೇನ್ ಹೈಕಾಡಿ, ಪುಷ್ಪಾ ಶೆಟ್ಟಿ, ಡಾ.ಶಿವಕುಮಾರ್, ರಾಷ್ಟ್ರೀಯ ನಿರ್ದೇಶಕ ಓರಿಯಂಟೇಶನ್ ಕೆಪಿಎ ರೆಹಮಾನ್, ಮಂಗಳೂರು ಘಟಕ ನಿಕಟ ಪೂರ್ವ ಅಧ್ಯಕ್ಷ ಅಶೋಕ್ ಎಂಕೆ, ಮಂಗಳೂರು ಘಟಕ ಕಾರ್ಯದರ್ಶಿ ಸುನಂದ ಶಿವರಾಂ, ಪಿಎಸ್ ಟಿ ತರಬೇತಿ ಕಾರ್ಯಕ್ರಮದ ಕಾರ್ಯಕ್ರಮ ನಿರ್ದೇಶಕ ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.

ಎಸ್‌ಸಿಐ ಮಂಗಳೂರು ಘಟಕದ ಅಧ್ಯಕ್ಷ ದತ್ತಾತ್ರೇಯ ಬಾಳ ಸ್ವಾಗತಿಸಿದರು. ಅನಿಲ್ ಪಿಂಟೊ ಹಾಗೂ ಹರೀಶ್ ಎ. ಅತಿಥಿಗಳನ್ನು ಪರಿಚಯಿಸಿದರು. ರಾಷ್ಟ್ರೀಯ ಖಜಾಂಜಿ ಜೋಸ್ ಖಂಡೋತ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net