ತಂತ್ರಜ್ಞಾನದ ರಭಸಕ್ಕೆ ನಾಶವಾಗುತ್ತಿದೆ ಕಲೆ, ಸಂಸ್ಕೃತಿ...

Yakshgana
Published on

ಕೆರ್ವಾಶೆ ದೇವಳ ಮೊಕ್ತೇಸರ ರಮೇಶ ಕಾರ್ಣಿಕ ಅಭಿಪ್ರಾಯ

ಕೆ.ಸುರೇಂದ್ರ ಶೆಣೈಗೆ ಯಕ್ಷಗಾನ ಕಲಾರಾಧಕ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ತಂತ್ರಜ್ಞಾನದ ರಭಸಕ್ಕೆ ನಮ್ಮ ದೇಶದ ಪ್ರಾಚಿನ ಕಲೆ, ಸಂಸ್ಕೃತಿ ಕೊಚ್ಚಿಕೊಂಡು ಹೋಗುತ್ತಿವೆ. ಅದನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯ ಪ್ರಶಂಸನೀಯ ಎಂದು ಕೆರ್ವಾಶೆ ಮಹಾಲಿಂಗೇಶ್ವರ ದೇವಳದ ಮೊಕ್ತೇಸರ ರಮೇಶ ಕಾರ್ಣಿಕ ಅಭಿಪ್ರಾಯಪಟ್ಟರು.

ಉಡುಪಿಯ ಕೆರ್ವಾಶೆ ಮಹಾಲಿಂಗೇಶ್ವರ ದೇವಳದಲ್ಲಿ ಮಾ.19ರಂದು ಆಯೋಜಿಸಿದ್ದ ಯು.ವಿಶ್ವನಾಥ ಶೆಣೈ, ಪ್ರಭಾವತಿ ವಿ. ಶೆಣೈ ದಂಪತಿ ಪ್ರಾಯೋಜಕತ್ವದ, ಉಡುಪಿ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ನಡೆದ ಯಕ್ಷಗಾನ ಕಲಾರಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆತ್ಮೀಯತೆಯ ಕ್ಷಣ

ಯಕ್ಷಗಾನಕ್ಕೆ ಕೆ.ಸುರೇಂದ್ರ ಶೆಣೈ ಅವರ ಕೊಡುಗೆ ದೊಡ್ಡದು. ಎರಡೂವರೆ ದಶಕಗಳ ಕಾಲ ಕಾಂತಾವರ, ಪುತ್ತೂರು, ಬಪ್ಪನಾಡು, ಸುಂಕದಕಟ್ಟೆ, ಸುರತ್ಕಲ್​ ಮೇಳಗಳಲ್ಲಿ ಹಾಗೂ ಹಲವು ಸಂಘಗಳಲ್ಲಿ ರ್ದಿಕಾಲ ಸೇವೆಗೈದಿದ್ದಾರೆ. ತೆಂಕುತಿಟ್ಟಿನ ಹಿರಿಯ ಭಾಗವತರಾದ ಅವರನ್ನು ದಂಪತಿ ಸಮೇತ ಯಕ್ಷಗಾನ ಕಲಾರಾಧಕ ಪ್ರಶಸ್ತಿ ಕೊಡುತ್ತಿರುವುದು ವಿಶೇಷ ಹಾಗೂ ಆತ್ಮೀಯ ಕ್ಷಣವಾಗಿದೆ ಎಂದರು.

20 ಸಾವಿರ ರೂ. ನಗದು ಪುರಸ್ಕಾರ, ಪ್ರಶಸ್ತಿ ಪರಿಕರಗಳೊಂದಿಗೆ ಸುರೇಂದ್ರ ಶೆಣೈ ಅವರನ್ನು ಸನ್ಮಾನಿಸಲಾಯಿತು.

ಮಹಾವೀರ ಪಾಂಡಿ ಸಮ್ಮಾನಿತರನ್ನು ಪರಿಚಯಿಸಿದರು. ನಿರಂಜನ ಭಟ್​ ಅವರು ಒಡನಾಟ ಸ್ಮರಿಸಿಕೊಂಡರು. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು.

ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್​, ಸದಸ್ಯರಾದ ಯು.ಎಸ್​. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಪ್ರಶಾಂತ ಕಾಮತ, ವಿನಾಯಕ ಬಾಳಿಗಾ, ಅರ್ಚಕರಾದ ಪದ್ಮನಾಭ ಭಟ್ಟ, ಜಗದೀಶ್​ ಭಟ್ಟ, ಗ್ರಾಪಂ ಅಧ್ಯಕ್ಷೆ ಸುನೀತಾ, ಧರ್ಮರಾಜ ಹೆಗ್ಡೆ, ರಾಮರಾಯ ನಾಯಕ ಮತ್ತು ಕೆರ್ವಾಶೆಯ ನಾಗರಿಕರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net