ನಿಮ್ಮೂರಿನ ಸರ್ಕಾರಿ ಶಾಲೆಗೆ ಮಕ್ಕಳ ಕಳುಹಿಸಿ

YLP KALIKA HABBA
Published on

ಯಲ್ಲಾಪುರ: ಪಾಲಕರು ಮಕ್ಕಳನ್ನು ತಮ್ಮ ಊರಿನ ಶಾಲೆಗೆ ಕಳುಹಿಸಿದರೆ ಮಾತ್ರ ಗ್ರಾಮೀಣ ಭಾಗದ ಶಾಲೆಗಳ ಉಳಿವು ಸಾಧ್ಯ. ಪಾಲಕರು, ಶಿಕ್ಷಕರು ಈ ಬಗೆಗೆ ಚಿಂತಿಸಬೇಕಾದ ಅಗತ್ಯವಿದೆ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ಹೇಳಿದರು.

ತಾಲೂಕಿನ ತಟಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಲ್ಲಾಪುರ 3ನೇ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ಭಟ್ಟ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕೊರತೆಯಿರುವುದು ಕೇವಲ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ. ಪಾಲಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಮುಂದಾಗಬೇಕು. ಶಿಕ್ಷಕರೂ ಪಾಲಕರ ಮನವೊಲಿಸುವಲ್ಲಿ, ಶಾಲೆಯನ್ನು ಉಳಿಸುವಲ್ಲಿ ಗಂಭೀರವಾಗಿ ಪ್ರಯತ್ನಿಸಬೇಕು ಎಂದರು.

ಎಸ್​ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಹಂಗಾರಿ, ಹಿರಿಯರಾದ ರಾಮಕೃಷ್ಣ ಭಾಗ್ವತ ಶೀಗೆಪಾಲ, ಬಿಐಇಆರ್​ಟಿ ಎಂ.ಎ. ಬಾಗೇವಾಡಿ, ಬಿಆರ್​ಪಿ ಸುಲೋಚನಾ ಹೆಗಡೆ, ಸಿ.ಆರ್​ಪಿಗಳಾದ ಮೋಹನ ನಾಯ್ಕ, ಅಮಿತಾ ನಾಯ್ಕ, ದೀಪಾ ಶೇಟ್, ಮುಖ್ಯಾಧ್ಯಾಪಕ ಉದಯ ನಾಯಕ, ಇತರರಿದ್ದರು. ಸಿಆರ್​ಪಿ ಶಿವಾನಂದ ವೆರ್ಣೆಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸರೋಜಿನಿ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಯಲ್ಲಾಪುರ 3ನೇ ಕ್ಲಸ್ಟರ್ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net