ಶೇ.40 ಕಮಿಷನ್ ಪಡೆದ ತಪ್ಪಿತಸ್ಥರನ್ನು ಜೈಲಿಗೆ ಕಳುಹಿ

Prathap Simha
Published on

ರಾಜ್ಯ ಸರ್ಕಾರ ಶೇ.40 ಕಮಿಷನ್ ಎಂದು ಆರೋಪ ಮಾಡಬಾರದು. ಬದಲಿಗೆ ಬಿಟ್‌ಕಾಯಿನ್ ಹಾಗೂ ಶೇ.40ರಷ್ಟು ಕಮಿಷನ್ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವಂತೆ ಕೈ ಮುಗಿದು ಕೇಳುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದರು.

ಆ ಮೂಲಕ ರಾಜ್ಯ ರಾಜಕಾರಣವನ್ನು ಶುದ್ಧಗೊಳಿಸಿ. ಇಲ್ಲವಾದರೆ, ಮೂರು ಪಕ್ಷಗಳಲ್ಲಿಯೂ ಇಂತಹ ರಾಜಕೀಯ ಆರೋಪಗಳಲ್ಲಿ ಹುರುಳಿರುವುದಿಲ್ಲ ಎಂಬುದು ಸಾರ್ವಜನಿಕರಿಗೆ ಬಹಿರಂಗ ಆಗಲಿದೆ. ನೂತನ ಸಂಸತ್ ಭವನ ಮೋದಿ ಅವರ ಕನಸಾಗಿದೆ. ಇದೇ ಕಾರಣಕ್ಕೆ ಅವರ ಅವಧಿಯಲ್ಲೇ ಭೂಮಿಪೂಜೆ ಆಗಿದ್ದು, ಉದ್ಘಾಟನೆ ಸಹ ಅವರಿಂದಲೇ ಆಗಲಿದೆ. ನಂತರ ರಾಷ್ಟ್ರಪತಿ ಮರ್ಮು ಅವರು ಅಧಿವೇಶನದಲ್ಲಿರಲಿದ್ದಾರೆ. ಇದರಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net