ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ತುಮಕೂರು ಜಿಲ್ಲೆಯಿಂದ ಮಣ್ಣು ; ಪುಣ್ಯ ಕ್ಷೇತ್ರಗಳಿಂದ ಸಂಗ್ರಹಿಸಿದ ಮೃತ್ತಿಕೆ, ತೀರ್ಥ

25TMK_Ayodya_Mrutike
Published on

ತುಮಕೂರು: ಅಯೋಧ್ಯೆಯಲ್ಲಿ ಆ.5ರಂದು ಶ್ರೀರಾಮ ಭವ್ಯಮಂದಿರದ ಶಿಲಾನ್ಯಾಸಕ್ಕೆ ಜಿಲ್ಲೆಯ ಪುಣ್ಯ ಕ್ಷೇತ್ರಗಳಿಂದ ಮಣ್ಣು ಕಳುಹಿಸಿಕೊಡಲಾಯಿತು.

ದೇಶದ ಪ್ರಮುಖ ಪುಣ್ಯ ಕ್ಷೇತ್ರಗಳ ಮಣ್ಣು ಮತ್ತು ತೀರ್ಥವನ್ನು ಹೋಮಕ್ಕೆ ಬಳಸಲಿದ್ದು, ತುಮಕೂರಿನ ಪ್ರಸಿದ್ಧ ಪುಣ್ಯಕ್ಷೇತ್ರ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದದೊಂದಿಗೆ ಕಳುಹಿಸಲಾಯಿತು. ವಿಶ್ವ ಹಿಂದು ಪರಿಷತ್, ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಆಶೀರ್ವದಿಸಿ ಸಿದ್ಧಗಂಗಾ ಮಠದ ಮೃತ್ತಿಕೆ ಮತ್ತು ತೀರ್ಥವನ್ನು ಅಯೋಧ್ಯೆಗೆ ಕಳುಹಿಸಲು ಹಸ್ತಾಂತರಿಸಿದರು. ಜಿಲ್ಲೆಯ ಪುಣ್ಯ ಕ್ಷೇತ್ರಗಳಾದ ಸಿದ್ಧರಬೆಟ್ಟ, ದೇವರಾಯನದುರ್ಗ, ನಾಮದ ಚಿಲುಮೆ, ಎಡೆಯೂರು ಮತ್ತು ಶಿವಗಂಗೆಯಿಂದ ಕಾರ್ಯಕರ್ತರು ಸಂಗ್ರಹಿಸಿದ ಮೃತ್ತಿಕೆ ಮತ್ತು ತೀರ್ಥವನ್ನು ವಿಶೇಷ ಪೂಜೆಯೊಂದಿಗೆ ಕಳುಹಿಸಿಕೊಡಲಾಯಿತು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಸಂಚಾಲಕ ಜಿ.ಕೆ.ಶ್ರೆನಿವಾಸ್, ಹಿಂದು ಜಾಗರಣಾ ವೇದಿಕೆ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಿ.ಎಸ್.ಬಸವರಾಜು ಮತ್ತು ತುಮಕೂರಿನ ಬಜರಂಗದಳ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net