ಜಾಂಬೋರೇಟ್​ಗೆ ರೊಟ್ಟಿ, ಶೇಂಗಾ ಚಟ್ನಿ ರವಾನೆ

2 LXR 7
Published on

ಲಕ್ಷ್ಮೇಶ್ವರ: ಧಾರವಾಡದಲ್ಲಿ ಜ.6 ರಿಂದ 10ರವರೆಗೆ ಸಸ್ಯ ಚೇತನ ಜಿಲ್ಲಾ ಸ್ಕೌಟ್ಸ್, ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ಜಾಂಬೋರೇಟ್​ಗೆ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನಿಂದ ರೊಟ್ಟಿ ಮತ್ತು ಶೇಂಗಾ ಚಟ್ನಿಯನ್ನು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಯಕ್ ಅವರ ಸಮ್ಮುಖದಲ್ಲಿ ರವಾನಿಸಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಮತ್ತು ಧಾರವಾಡ ಜಿಲ್ಲಾ ಸಂಸ್ಥೆ ಸಹಯೋಗದೊಂದಿಗೆ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಾರವಾರ, ಶಿರಸಿ, ವಿಜಯಪುರ ಜಿಲ್ಲೆಗಳ ಸ್ಕೌಟ್ಸ್ ಗೈಡ್ಸ್ ಗಳಿಗೆ ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ಜ. 6 ರಿಂದ 10 ರವರೆಗೆ ದಡ್ಡಿಕಮಲಾಪುರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ 5000 ರೊಟ್ಟಿ ಮತ್ತು ಶೇಂಗಾ ಚಟ್ನಿಯನ್ನು ಶಿಕ್ಷಣ ಇಲಾಖೆ ವತಿಯಿಂದ ವಿವಿಧ ಶಾಲೆಗಳಿಂದ ಸಂಗ್ರಹಿಸಿ ಕಳುಹಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಮಾತನಾಡಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಬಿಆರ್​ಪಿ ಈಶ್ವರ ಮೆಡ್ಲೇರಿ, ಸಿಆರ್​ಪಿ ಗಳಾದ ಸತೀಶ ಬೋಮಲೆ, ಉಮೇಶ ನೇಕಾರ, ಲೋಕೇಶ ಮಠದ, ಮುಖ್ಯ ಶಿಕ್ಷಕರಾದ ಬಸವರಾಜ ಕುಂಬಾರ, ಶಿಕ್ಷಕರಾದ ಎನ್.ಎಸ್.ಬಂಕಾಪುರ, ಆರ್.ಎಂ. ಶಿರಹಟ್ಟಿ, ಎಚ್.ಡಿ. ನಿಂಗರೆಡ್ಡಿ, ಎಲ್.ಎ. ಬಣಕಾರ, ಆರ್.ಕೆ.ಉಪನಾಳ, ಹಾಲನಗೌಡ ಪಾಟೀಲ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net