

ಕೆ.ಆರ್.ಸಾಗರ : ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪಿ.ಎಸೈ ಆಗಿದ್ದ ಶಿವರಾಜು ಸೇವಾ ನಿವೃತ್ತಿಹೊಂದಿದ ಸಂದರ್ಭ
ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸುದೀರ್ಘ 32 ವರ್ಷ ಪೊಲೀಸ್ ವೃತ್ತಿ ನಿರ್ವಹಿಸಿ, ಪಿ.ಎಸೈ ತನಕ ಪದನ್ನೋತಿ ಹೊಂದಿದ್ದ ಶಿವರಾಜು ಅವರ ಸೇವೆಯನ್ನು ಸಿಬ್ಬಂದಿ ಕೊಂಡಾಡಿದರು. ಶಿವರಾಜು ದಂಪತಿಗೆ ಕೆ.ಆರ್.ಸಾಗರ ಠಾಣೆ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಪಿ.ಎಸೈಗಳಾದ ರಮೇಶ್ ಕರ್ಕಿಕಟ್ಟೆ, ಸುಸ್ಮಿತಾ ಮತ್ತು ಠಾಣಾ ಸಿಬ್ಬಂದಿ ಇದ್ದರು.