ನೊಂದವರ ಪರವಾಗಿ ಕೆಲಸ ನಿರ್ವಹಿಸಿ

14HDK0003
Published on

ಎಚ್ ಡಿ ಕೋಟೆ : ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ನೊಂದವರ ಪರವಾಗಿ, ನಾಗರಿಕರ ಹಿತ ಪಾಲನೆಗಾಗಿ ಕೆಲಸ ನಿರ್ವಹಿಸಿದರೆ ಮಾತ್ರ ತಾಲೂಕು ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಹಸೀಲ್ದಾರ್ ಶ್ರೀನಿವಾಸ ಹೇಳಿದರು. ವರ್ಗಾವಣೆಗೊಂಡ ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್‌ಗೆ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಚ್.ಡಿ.ಕೋಟೆ ತಾಲೂಕಿನಲ್ಲಿ ಕೆಲಸ ನಿರ್ವಹಿಸುವುದು ಒಂದು ಸವಾಲು. ಹಾಗಿದ್ದರೂ ಶಬ್ವೀರ್ ಹುಸೇನ್ ನನಗೆ ನೀಡಿದ ಸಹಕಾರ ದೊಡ್ಡದು. ತಾಲೂಕು ಆಡಳಿತ ನಿರ್ವಹಣೆ ಸಂದರ್ಭ ಅವರ ಸಹಕಾರ ಅನನ್ಯವಾಗಿತ್ತು ಎಂದು ಶ್ಲಾಘಿಸಿದರು. ತಾಲೂಕಿನ ಅಭಿವೃದ್ಧಿಗೆ ತಹಸೀಲ್ದಾರ್, ಪೊಲೀಸ್ ಇನ್ಸ್‌ಪ್ಪೆಕ್ಟರ್ ಮತ್ತು ತಾಪಂ ಇಒ ಜವಾಬ್ದಾರಿ ಬಹು ದೊಡ್ಡದು. ಈ ಮೂವರ ನಡುವೆ ಹೊಂದಾಣಿಕೆ, ಜವಾಬ್ದಾರಿ ಹಂಚಿಕೆ ಮತ್ತು ಜನಪರ ಕಾಳಜಿ ಇದ್ದರೆ ಪ್ರಗತಿ ಕಾರ್ಯಗಳು ಸುಗಮವಾಗಲಿವೆ. ಇದನ್ನು ಅರ್ಥ ಮಾಡಿಕೊಂಡು ಸರ್ಕಾರಿ ಸಿಬ್ಬಂದಿಗಳೂ ಸಹಕಾರ ನೀಡಬೇಕು ಎಂದರು. ಇನ್ಸ್‌ಪೆಕ್ಟರ್‌ಗಳಾದ ಚಿಕ್ಕನಾಯಕ, ಸುರೇಶ್ ನಾಯಕ್, ಗೌರಿಶಂಕರ್, ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಫಿ ಕೋಟೆ, ಆಶ್ರಯ ಸಮಿತಿ ಸದಸ್ಯರಾದ ನಜೀರ್ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net