

ಕುಶಾಲನಗರ:
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಬ್ಬಾಲೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ್ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಹಬ್ಬವನ್ನಾಗಿ ಸಂಭ್ರಮದಿAದ ಆಚರಿಸಿ ಸಂತೋಷದಿAದ ಪರೀಕ್ಷೆ ಬರೆಯಬೇಕು.
ಸೋಲೇ ಗೆಲುವಿನ ಸೋಪಾನವಾಗಿರುತ್ತದೆ. ಯಾರೂ ಕೂಡ ಪರೀಕ್ಷೆಗೆ ಭಯಪಡದೆ ಧೈರ್ಯವಾಗಿ ಕನಸಿನ ರೆಕ್ಕೆಗಳನ್ನು ಕಟ್ಟಿಕೊಂಡಾಗ ಮಾತ್ರ ಉತ್ತಮವಾದ ಗುರಿ ಮುಟ್ಟಲು ಸಾಧ್ಯ. 10ನೇ ತರಗತಿ ಪರೀಕ್ಷೆಗೆ ಚೆನ್ನಾಗಿ ಓದಿ ಉತ್ತಮ ಫಲಿತಾಂಶವನ್ನು ನೀಡಿ ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಹಳೆಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ರಮೇಶ್ ಮಾತನಾಡಿ ಈ ಸಂಸ್ಥೆಗೆ ಒಳ್ಳೆಯ ಇತಿಹಾಸವಿದೆ. ನೈತಿಕ ಶಿಕ್ಷಣವನ್ನು ಇಲ್ಲಿ ನೀಡುತ್ತಾರೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರದ ಮೌಲ್ಯ ಕಲಿಸುತ್ತಾರೆ. ಈ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ದೇಶದ ಉತ್ತಮ ಪ್ರಜೆಗಳಾಗಿ ಶಾಲೆಗೆ ಒಳ್ಳೆಯ ಫಲಿತಾಂಶ ನೀಡುತ್ತಾ ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ ವಿದ್ಯಾರ್ಥಿಗಳು ಮುಕ್ತವಾಗಿ ಯಾವುದೇ ಭಯವಿಲ್ಲದೆ ಶಿಕ್ಷಕರು ತೋರಿಸಿಕೊಟ್ಟ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಪರೀಕ್ಷೆಯನ್ನು ಉತ್ತಮವಾಗಿ ಬರೆದು ಒಂದು ಒಳ್ಳೆಯ ಪಲಿತಾಂಶವನ್ನು ನೀಡಬೇಕು ಎಂದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡು ಭಾವುಕರಾದರು.
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಕೆ. ವಿಜಯ್ ಕುಮಾರ್, ಉಪನ್ಯಾಸಕರಾದ ಗೌತಮಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಬಸವರಾಜ ಶೆಟ್ಟಿ, ಅಧ್ಯಾಪಕರಾದ ಮೇ. ನಾ. ವೆಂಕಟನಾಯ್ಕ, ಡಿ. ಕವಿತಾ ಸಿ. ಡಿ. ಲೋಕೇಶ್, ಹೆಚ್.ಎಸ್. ಬೋಜೇಗೌಡ, ಎ.ಕೆ. ಶ್ವೇತಾ, ಎಸ್. ಎಸ್. ಮುತ್ತಣ್ಣನÀವರ್ ಇದ್ದರು.