ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಿ

Sirigeri School
ಸಿರಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಿ.ಬೀಬಿ ಫಾತಿಮಾ ಅವರು 250 ಲೋಟಗಳನ್ನು ವಿತರಿಸಿದರು. ಮುಖ್ಯಶಿಕ್ಷಕ ಶೇಕ್ಷಾವಲಿ, ಶಿಕ್ಷಕರಾದ ಬಸವನಗೌಡ, ರೇವತಿ, ಶಾಂಭವಿ, ವನಜಾಕ್ಷಿ, ರೆಹನಾಬೀ ಇತರರಿದ್ದರು.
Published on

ಸಿರಿಗೇರಿ: ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯ ಶಿಕ್ಷಕಿ ಪಿ. ಬೀಬಿ ಫಾತಿಮಾ ಅವರು ಕರ್ತವ್ಯಕ್ಕೆ ಸೇರಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗಾಗಿ 250 ಲೋಟಗಳನ್ನು ದೇಣಿಗೆ ನೀಡಿದರು.

ಮುಖ್ಯಶಿಕ್ಷಕ ಶೇಕ್ಷಾವಲಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಾಲೆಗೆ ದೇಣಿಗೆ ನೀಡುವ ಮೂಲಕ ಶಿಕ್ಷಕಿ ಬೀಬಿ ಫಾತಿಮಾ ಮಾದರಿಯಾಗಿದ್ದಾರೆ ಎಂದರು. ಸಿಆರ್‌ಪಿ ಅರುಣ್ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬಡ ವಿದ್ಯಾರ್ಥಿಗಳು ಇಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಬೇಕು.

ಭವಿಷ್ಯದಲ್ಲಿ ಉನ್ನತ ಹುದ್ದೆ ಪಡೆಯುವ ಮೂಲಕ ಉತ್ತಮ ಜೀವನ ಕಂಡುಕೊಳ್ಳಬೇಕು. ಪಾಲಕರು ತಪ್ಪದೆ ಮಕ್ಕಳನ್ನು ಶಾಲೆಗೆ ಕಳಿಸಬೇಕು ಎಂದರು. ಶಿಕ್ಷಕರಾದ ಬಸವನಗೌಡ, ರೇವತಿ, ಶಾಂಭವಿ, ವನಜಾಕ್ಷಿ, ರೆಹನಾಬೀ, ಬಾಲೆ ಸಾಬ್, ಪ್ರಿಯಾಂಕಾ, ಚಂದ್ರಕಲಾ, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net