ಕಳಪೆ ಆಹಾರ ವಾಪಾಸ್ ಕಳುಹಿಸಿ

ಕನಕಗಿರಿಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರೋಷನ್ ಮಂಗಳವಾರ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದರು. ಸಿಆರ್‌ಪಿ ಮಹೇಶ, ಇಸಿಒ ಆಂಜನೇಯ ಇದ್ದರು.
ಕನಕಗಿರಿಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರೋಷನ್ ಮಂಗಳವಾರ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದರು. ಸಿಆರ್‌ಪಿ ಮಹೇಶ, ಇಸಿಒ ಆಂಜನೇಯ ಇದ್ದರು.
Published on

ಕನಕಗಿರಿ: ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಕಳಪೆ ಆಹಾರ ಪದಾರ್ಥ ಪೂರೈಕೆಯ ಆರೋಪದ ಹಿನ್ನೆಲೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರೋಷನ್ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದರು.

ಕೇವಲ ಇದೊಂದೆ ಶಾಲೆಗೆ ಅಲ್ಲದೆ ತಾಲೂಕಿನ ವಿವಿಧ ಶಾಲೆಗಳಿಗೂ ಸರಬರಾಜಾದ ಆಹಾರ ಪದಾರ್ಥಗಳು ಕಳಪೆಯಾಗಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಯಾರು ಹೊಣೆ ಎಂದು ಎಸ್‌ಡಿಎಂಸಿ ಸದಸ್ಯರು ಪ್ರಶ್ನಿಸಿದರು. ಸರ್ಕಾರದ ಮಟ್ಟದಲ್ಲಿಯೇ ಟೆಂಡರ್ ಆಗಿದ್ದು, ಅಲ್ಲಿಂದ ದಾಸ್ತಾನು ಬರುತ್ತದೆ. ಆಯಾ ಶಾಲೆಗಳ ಮುಖ್ಯಶಿಕ್ಷಕರು ಸ್ವಚ್ಛ ಮಾಡಿಸಿ ಅಡುಗೆ ಮಾಡಿಸಬೇಕು. ಬಿಸಿಯೂಟ ತಯಾರಕರು ಆಹಾರ ಧಾನ್ಯ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಂಡು ಅಡುಗೆ ಮಾಡಬೇಕು. ಇಲ್ಲವಾದರೆ, ಅಂಥ ಪದಾರ್ಥಗಳನ್ನು ವಾಪಾಸ್ ಕಳುಹಿಸಬೇಕು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು. ಅಲ್ಲದೇ, ಮೇಲಧಿಕಾರಿಗಳಿಗೆ ತಿಳಿಸಿದ ಮಾಹಿತಿಯನ್ನು ವರದಿ ರೂಪದಲ್ಲಿ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಸಂಗಮೇಶ ಹಿರೇಮಠ ಅವರ ಸ್ಥಾನಕ್ಕೆ ಮಲ್ಲಿಕಾರ್ಜುನ ಕುಷ್ಟಗಿ ಅವರನ್ನು ಪ್ರಭಾರ ಮುಖ್ಯಶಿಕ್ಷಕರನ್ನಾಗಿ ನೇಮಿಸಲು ಮೇಲಧಿಕಾರಿಗಳಿಗೆ ವರದಿ ನೀಡುವಂತೆ ಎಡಿಎಂಸಿ ಸದಸ್ಯರು, ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು.

ಸಿಆರ್‌ಪಿಗಳಾದ ಮಹೇಶ, ಶಿವು ಹೆಳವರ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಪ್ರಗತಿಪರ ಸಂಘಟನೆಗಳ ಸಂಚಾಲಕರಾದ ಪಾಮಣ್ಣ ಅರಳಿಗನೂರು, ವೆಂಕಟೇಶ ನಿರ್ಲೂಟಿ, ಎಸ್‌ಡಿಎಂಸಿ ಸದಸ್ಯ ಹನುಮಂತರೆಡ್ಡಿ ಮಹಲಿನಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net