ಎಪಿಕೆ ಲಿಂಕ್ ಕಳುಹಿಸಿ 2,24,800 ರೂ. ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ಎಪಿಕೆ ಲಿಂಕ್ ಕಳುಹಿಸಿ 2,24,800 ರೂ. ವಂಚನೆ ಮಾಡಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ 2026ರ ಎ 24ರಂದು ಸ್ನೇಹಿತನ ಮೊಬೈಲ್ ಸಂಖ್ಯೆಯಿಂದ ಎಪಿಕೆ ಲಿಂಕ್ ಬಂದಿದೆ. ಅದರಲ್ಲಿ ಆರ್ ಟಿಒ ಚಲನ್ ಎಂದು ಬರೆದಿತ್ತು. ಅದನ್ನು ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗಿದೆ. ಅದರಲ್ಲಿ ಜಿ-ಮೇಲ್, ಮೊಬೈಲ್ ಸಂಖ್ಯೆ ನಮೂದಿಸುವಂತೆ ಇದ್ದುದ್ದರಿಂದ ಅದನ್ನು ನಮೂದಿಸಿದ್ದಾರೆ. ಅನಂತರ ಅವರ ವಾಟ್ಸ್ ಪ್ ಕೆಲಸ ಮಾಡಿಲ್ಲ, ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಸಹ ಕಾರ್ಯನಿರ್ವಹಿಸದೆ ಬ್ಲಾಕ್ ಆಗಿದೆ. ಅದೇ ದಿನ ಬೇರೆ ಸಿಮ್ ಖರೀದಿಸಿ ಬಳಸಲು ಆರಂಭಿಸಿದ್ದಾರೆ.

ಎ.28ರಂದು ಖಾತೆಯಿಂದ ಹಣ ಡೆಬಿಟ್ ಆದ ಬಗ್ಗೆ ಮೆಸೆಜ್ ಬರಲು ಪ್ರಾರಂಭಿಸಿದೆ. ಕೂಡಲೇ ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಿದಾಗ ಹಂತ ಹಂತವಾಗಿ 2,24,800 ರೂ. ವಿವಿಧ ಖಾತೆಗಳಿಗೆ ವರ್ಗಾವಣೆ ಆಗಿರುವುದು ತಿಳಿದು ಬಂದಿದೆ. ಯಾರೋ ಅಪರಿಚಿತರು ವಂಚನೆ ಮಾಡುವ ಉದ್ದೇಶದಿಂದ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net