

ಮಂಗಳೂರು: ನಗರದ ಸ್ಮಾರ್ಟ್ ಸಿಟಿಯ ರಸ್ತೆಯಲ್ಲಿರುವ ದೊಡ್ಡ ಗುಂಡಿಗಳ ೆಟೋ ತೆಗೆದು ವಾಟ್ಸಾೃಪ್ ಮಾಡಿ ಅದರಲ್ಲಿ ಆಯ್ಕೆಯಾದವರಿಗೆ ನಗದು ಬಹುಮಾನ ಲಭಿಸಲಿದೆ. ಹೀಗೊಂದು ವಿನೂತನ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ಮಾರ್ಟ್ ಸಿಟಿ ಮಾದರಿ ರಸ್ತೆ, ಗುಂಡಿಗಳ ಸ್ಪರ್ಧೆ-2022 ಸ್ಪರ್ಧೆ ಎಂದು ಹೆಸರು ನೀಡಲಾಗಿದೆ. ಆ.24ರಿಂದ ಆ.29ರ ಸಂಜೆ 5 ರ ತನಕ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಪ್ರದೇಶದ ಅತ್ಯಂತ ದೊಡ್ಡ ಮತ್ತು ಅಪಾಯಕಾರಿ ಗುಂಡಿಯನ್ನು(ಹೊಂಡ) ಗುರುತಿಸಿ ಚಿಕ್ಕ ವಿಡಿಯೋ, ಫೋಟೊ ಹಾಗೂ ಜಿಪಿಎಸ್ ಲೊಕೇಶನ್‌ನ್ನು 9731485875 ಮೊಬೈಲ್ ಸಂಖ್ಯೆಗೆ ವಾಟ್ಸಾೃಪ್ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸ್ಪರ್ಧೆಯಲ್ಲಿ ಪ್ರಥಮ 5 ಸಾವಿರ, ದ್ವಿತೀಯ ಮೂರು ಸಾವಿರ ಹಾಗೂ ತೃತೀಯ 2 ಸಾವಿರ ರೂ.ಗಳನ್ನು ಸಂಘಸಂಸ್ಥೆಗಳ ಮೂಲಕ ನೀಡಲಾಗುತ್ತದೆ. ಮೂವರು ತೀರ್ಪುಗಾರರು ಈ ಚಿತ್ರಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ಆ.30ರಂದು ಬೆಳಗ್ಗೆ 10ಕ್ಕೆ ಸಾರ್ವಜನಿಕರು ಗುರುತಿಸಿ, ಕಳುಹಿಸಿದ ಗುಂಡಿಗಳನ್ನು ಪರಿಣಿತರು ಮತ್ತು ಸಂಘಟಕರು ಸೇರಿ ಪರಿಶೀಲಿಸುವರು. ಸಂಜೆ 3.30ಕ್ಕೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿಯ ಮುಂದೆ ಸಾರ್ವಜನಿಕವಾಗಿ ಬಹುಮಾನಗಳನ್ನು ಗಣ್ಯ ವ್ಯಕ್ತಿಗಳ ಮೂಲಕ ವಿತರಿಸಲಾಗುತ್ತದೆ ಎಂದರು.
ಕಾರ್ಯಕ್ರಮ ಸಂಚಾಲಕರಾದ ದೀಕ್ಷಿತ್ ಅತ್ತಾವರ, ಮೀನಾ ಟೆಲ್ಲಿಸ್, ರಮಾನಂದ ಪೂಜಾರಿ ಹಾಗೂ ಮಾರ್ಸೆಲ್ ಮೊಂತೆರೋ ಇದ್ದರು.