

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯೋತ್ಸವ ಅಂಗವಾಗಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಹಿರಿಯ ಜೀವಿಗಳ ಬದುಕು-ಸಾಧನೆ ಕುರಿತು ಹಮ್ಮಿಕೊಂಡಿರುವ ಧರೆಗೆ ದೊಡ್ಡವರು ವಿಶೇಷ ಕಾರ್ಯಕ್ರಮದಡಿ ನ. 25ರಂದು ಬೆಳಗ್ಗೆ 10.30ಕ್ಕೆ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಬದುಕು ಮತ್ತು ಕೊಡುಗೆ ಕುರಿತು ವಿಚಾರ ಸಂಕಿರಣ ಹಾಗೂ ಸನ್ಮಾನ ಏರ್ಪಡಿಸಲಾಗಿದೆ.
ಡಾ. ಚಂದ್ರಶೇಖರ ಕಂಬಾರ ಬದುಕು ಮತ್ತು ಕೊಡುಗೆ ಕುರಿತು ಹಂಪಿಯ ಡಾ. ವಿರೇಶ ಬಡಿಗೇರ ಹಾಗೂ ಬೆಂಗಳೂರಿನ ಡಾ. ಬಸವರಾಜ ಕಲ್ಗುಡಿ ಮಾತನಾಡುವರು. ಡಾ. ಮಹೇಶ ಹೊರಕೇರಿ ಸಂಯೋಜನೆ ಮಾಡುವರು. ಸಾಹಿತಿಗಳು, ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.