

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆದಾಯ ತೆರಿಗೆ ಇಲಾಖೆ (ವಿನಾಯಿತಿಗಳು) ಸಹಯೋಗದೊಂದಿಗೆ "ಟ್ರಸ್ಟ್, ಎನ್ ಜಿಒ'ಗಳ ಮೇಲಿನ ಆದಾಯ ತೆರಿಗೆ ನಿಬಂಧನೆಗಳ ಕುರಿತು ಜಾಗತಿ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.
ಅತಿಥಿಗಳಾಗಿದ್ದ ಆದಾಯ ತೆರಿಗೆ ಇಲಾಖೆ ಹುಬ್ಬಳ್ಳಿಯ ವಾರ್ಡ್ 1ರ ಅಧಿಕಾರಿ ಶರಣಕುಮಾರ ಕೋಳೂರು ಮಾತನಾಡಿ, ಟ್ರಸ್ಟ್ ಗಳು ಮತ್ತು ಎನ್ಜಿಒಗಳ ಮೇಲೆ ಪರಿಣಾಮ ಬೀರುವ ಆದಾಯ ತೆರಿಗೆ ನಿಬಂಧನೆಗಳ ಬಗ್ಗೆ ವಿಸತ ವಿವರಣೆ ನೀಡಿದರು.
ಆದಾಯ ತೆರಿಗೆ ಇನ್ಸ್ ಪೆಕ್ಟರ್ ನಂದನ್ ಕುಮಾರ್ ಬರ್ನವಾಲ್ ಅವರು, ನೋಂದಣಿ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ತಪ್ಪಿಸುವ ಕುರಿತು ತಿಳಿವಳಿಕೆ ನೀಡಿದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಸಂದೇಹಗಳನ್ನು ಪರಿಹಾರ ಮಾಡಿದರು.
ವಿವಿಧ ಎನ್ಜಿಒಗಳು ಮತ್ತು ಟ್ರಸ್ಟ್‌ನ ಪ್ರತಿನಿಧಿಗಳು, ಚಾರ್ರ್ಟಡ್ ಅಕೌಂಟೆಂಟ್ ಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕೆಸಿಸಿಐ ಉಪಾಧ್ಯಕ್ಷ ಪ್ರವಿಣ ಅಗಡಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಸಿಎ ಕಾರ್ತಿಕ ಶೆಟ್ಟಿ, ತೆರಿಗೆ ಸಮಿತಿಯ ಚೇರ್ಮನ್ ಚನ್ನವಿರ ಮುಂಗರವಾಡಿ, ಲೆಕ್ಕಪರಿಶೋಧಕರಾದ ಶೇಷಗಿರಿ ಕುಲಕಣಿರ್, ವೈ.ಎಂ. ಖಟಾವಕರ, ಆಡಿನವರ, ವಿನಾಯಕ ಕುಲಕರ್ಣಿ, ಸದಸ್ಯರಾದ ನೀಪಾ ಮೆಹ್ತಾ, ದೀಪಾಲಿ ಗೋಟಡಕಿ, ಎಂ.ವಿ. ಟೊಂಕದ, ಪಿ.ಡಿ. ಬನಸಾಲಿ ಇತರರು ಉಪಸ್ಥಿತರಿದ್ದರು.