

ಹುಬ್ಬಳ್ಳಿ: ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಆ. 29ರಂದು ಬೆಳಗ್ಗೆ 11 ಗಂಟೆಗೆ ವಿವಿಯ ಬಯೋಟೆಕ್ ಸಭಾಂಗಣದಲ್ಲಿ ‘ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕ್ರೀಡೆಯ ಪಾತ್ರ’ ಕುರಿತು ಸಮಾವೇಶ ಏರ್ಪಡಿಸಲಾಗಿದೆ.
ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ಆನಂದ ನಾಡಗೀರ ದಿಕ್ಸೂಚಿ ಭಾಷಣ ಮಾಡುವರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿವೃತ್ತ ರಿಜಿಸ್ಟ್ರಾರ್ ಡಾ. ಸುಂದರ ರಾಜ್ ಅರಸ್ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಮತೋಲನ ಕುರಿತು, ಫಿಫಾ ವೈದ್ಯಕೀಯ ಅಧಿಕಾರಿ ಡಾ. ಕಿರಣ ಕುಲಕರ್ಣಿ ಕ್ರೀಡೆಯಿಂದಾಗುವ ಗಾಯಗಳು, ತಡೆಗಟ್ಟುವಿಕೆ ಹಾಗೂ ಪ್ರಥಮ ಚಿಕಿತ್ಸೆ ಕುರಿತು ಹಾಗೂ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ. ರೇಣುಕಾ ಮೇಟಿ ಕ್ರೀಡೆ, ವ್ಯಾಯಾಮ ಮತ್ತು ಪೌಷ್ಟಿಕಾಂಶ ಕುರಿತು ಮಾತನಾಡುವರು.
ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಅಧ್ಯಕ್ಷತೆ ವಹಿಸುವರು.