ಮಾ.೨೩ ರಂದು ವಿಚಾರ ಸಂಕಿರಣ

JINDAPPA
JINDAPPA
Published on

ರಾಯಚೂರು ನಗರದ ಸರ್ಕಾರಿ ನೌಕರರ ಮನೋರಂಜನಾ ಕೇಂದ್ರದಲ್ಲಿ ಮಾ.೨೩ ರಂದು ರಾಜ್ಯ ಸರ್ಕಾರಿ ಎಸ್ಸಿಎಸ್ಟಿ ನೌಕರರ ಸಮನ್ವಯ ಸಮಿತಿ ಮತ್ತು ಹೊಸಮನಿ ಪ್ರಕಾಶನಗಳ ಸಹಯೋಗದಲ್ಲಿ ಕವಿ ಡಾ.ಸಿದ್ದಲಿಂಗಯ್ಯನವರ ಬದುಕು ಬರಹ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿಂದಪ್ಪ

ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಬಾಬು ಭಂಡಾರಿಗಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲಾ ್ಲಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಾ, ಜಿಲ್ಲಾ ದಲಿತಸಾಹಿತ್ಯ ಪರಿಷತ್ ಅಧ್ಯಕ್ಷ ತಾಯರಾಜ ಮರ್ಚಟ್ಹಾಳ, ಮಹಾಂತೇಶ ಬಿರಾದಾರ, ಇಮಾಮುದ್ದೀನ್ ಮಾಡಗಿರಿ, ದೇವರಾಜ ಬಿಂಗಮ್, ಕೆ.ಜಿ.ವೀರೇಶ, ಪಿ.ಬಸವರಾಜ ನಾಯಕ, ಹೊಸಮನಿ ಪ್ರಕಾಶನದ ಬಷೀರ ಅಹ್ಮದ್ ಹೊಸಮನಿ ಆಗಮಿಸಲಿದ್ದಾರೆ.

ಡಾ.ಸಿದ್ದಲಿಂಗಯ್ಯನವರ ಬದುಕು ಬರಹ ಕುರಿತು ಯುವ ಕವಿ ಈರಣ್ಣ ಬೆಂಗಾಲಿ ಉಪನ್ಯಾಸ ನೀಡಲಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರ ಸಾಮಾಜಕ ಹೋರಾಟ ಹಾಗೂ ಸಾಂಸ್ಕೃತಿಕ ಕೊಡುಗೆ ಕುರಿತು ಪತ್ರಕರ್ತ ಅಣ್ಣಪ್ಪ ಮೇಟಿಗೌಡ ಉಪನ್ಯಾಸ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂತೋಷ ನಂದಿನಿ, ರಾಘವೇಂದ್ರ, ಬಷೀರ ಅಹ್ಮದ ಹೊಸಮನಿ, ರುದ್ರಯ್ಯ ಗಣಚಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net