ಪುರಾಣಗಳ ಶುದ್ಧಪಾಠ ಪ್ರಕಾಶನಕ್ಕೆ ವಿದ್ವಾಂಸರ ಸಹಕಾರ ಅಗತ್ಯ

udp-4-seminar
Published on

ಉಡುಪಿ: ಅಷ್ಟಾದಶ ಪುರಾಣಗಳಲ್ಲಿ ಏಕಸೂತ್ರತೆ ತರಬೇಕು. ಪ್ರಪ್ತ ಭಾಗಗಳಿಂದ ಮೂಲ ಸ್ವರೂಪಕ್ಕೆ ಧಕ್ಕೆಯಾಗಿದೆ. ಹೀಗಾಗಿ ಶುದ್ಧಪಾಠದ ಪುರಾಣ ಪುಸ್ತಕ ಪ್ರಕಾಶನಕ್ಕೆ ವಿದ್ವಾಂಸರ ಸಹಕಾರ ಅಗತ್ಯ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ ಹೇಳಿದರು.

ಪಲಿಮಾರು ಮಠದಲ್ಲಿ ತತ್ವಸಂಶೋಧನಾ ಸಂಸತ್​ ಮತ್ತು ನವದೆಹಲಿಯ ಇಂಡಿಯನ್​ ಕೌನ್ಸಿಲ್​ ಆ​ ಫಿಲೋಸಫಿಕಲ್​ ರಿಸರ್ಚ್​ ಸೆಂಟರ್​ ಸಹಯೋಗದಲ್ಲಿ ನಡೆದ ದ್ವೈತ ಮತ್ತು ಬೌದ್ಧ ದರ್ಶನ ವಿಚಾರ ಸಂಕಿರಣದಲ್ಲಿ ಆಶೀರ್ವಚನ ನೀಡಿದರು.

ಬುದ್ಧನ ಮಾತು ಬಹಳಷ್ಟು ಪ್ರಭಾವಶಾಲಿಯಾಗಿದ್ದು, ಬೌದ್ಧ ದರ್ಶನ ಜಗದ್ಯಾಪಿಯಾಗಿದೆ. ಬುದ್ಧ ತನ್ನ 4 ಮಂದಿ ಶಿಷ್ಯರಿಗೆ ಏಕಕಾಲದಲ್ಲಿ ಬೋಧಿಸಿದ ಸಿದ್ಧಾಂತ ಒಂದೊಂದು ಕವಲಾಗಿ ಸಮರ್ಥವಾಗಿ ಬೆಳೆದು ಬಂದಿದೆ. ಮಾಧ್ಯಮಿಕರ ಪಕ್ಷ ಅತ್ಯಂತ ಪ್ರಬಲ. ವಿಶೇಷವೆಂದರೆ ವೇದದ ಮಹತ್ವವನ್ನು ಎಲ್ಲಾ ದರ್ಶನಕಾರರು ಒಪ್ಪಿದ್ದಾರೆ. ಇದು ವೇದಗಳ ಹಿರಿಮೆಗೆ ಸಾಕ್ಷಿ ಎಂದು ಹೇಳಿದರು.

ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ತಿರುಪತಿ ವಿವಿ ಪ್ರಾಧ್ಯಾಪಕ ಪ್ರೊ. ನಾರಾಯಣ ಪೂಜಾರ್​, ಗೋವಾ ವಿವಿ ಪ್ರಾಧ್ಯಾಪಕ ಪ್ರೊ. ವಾಲ್ಟರ್​ ಮಿನೇಜಸ್​, ಹಿರಿಯ ವಿದ್ವಾಂಸ ಡಾ. ಎ.ವಿ. ಆನಂದತೀರ್ಥ ನಾಗಸಂಪಿಗೆ ಭಾಗವಹಿಸಿದ್ದರು. ಪಲಿಮಾರು ಮಠದ ದಿವಾನ್​ ಪ್ರೊ. ವೇದವ್ಯಾಸ ತಂತ್ರಿ ಸ್ವಾಗತಿಸಿದರು. ತತ್ವಸಂಶೋಧನಾ ಸಂಸತ್​ ನಿರ್ದೇಶಕ ಡಾ. ವಂಶಿಕೃಷ್ಣ ಪುರೋಹಿತ್​ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಪ್ರಜ್ಞ ಭಟ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net