ಕರಾವಳಿಯ ಕಾವಿ ಕಲೆಗೂ ಲಭಿಸಲಿ ವಿಶ್ವ ಮನ್ನಣೆ...

Kavi-1
Published on

ಯಕ್ಷಗಾನ ಅಕಾಡೆಮಿಯ ನಮೃತಾ ಎನ್​. ಆಶಯ

ಕಾವಿ-ಯಕ್ಷಗಾನ ವಿಚಾರ ಸಂಕಿರಣ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರ್ನಾಟಕ ಕರಾವಳಿಯ ರಂಗಕಲೆಯಾದ ಯಕ್ಷಗಾನವು ವಿಶ್ವದೆಲ್ಲೆಡೆ ಮಾನ್ಯತೆ ಪಡೆಯುತ್ತಿದೆ. ಅಲ್ಲದೆ, ಅಳಿವಿನಂಚಿನಲ್ಲಿರುವ ಈ ಭಾಗದ ಕಾವಿ ಕಲೆಗೂ ಸಹ ವಿಶ್ವ ಮನ್ನಣೆ ಲಭಿಸಬೇಕಿದೆ. ಯುವ ಪೀಳಿಗೆ ಈ ಎರಡೂ ಕಲೆಗಳಲ್ಲಿ ಇನ್ನಷ್ಟು ತೊಡಗಿಕೊಳ್ಳಬೇಕು. ಕರಾವಳಿಯ ಈ ಸಂಸ್ಕೃತಿ

ಮುಂದುವರಿಯಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್​ ನಮೃತಾ ಎನ್​. ಆಶಯ ವ್ಯಕ್ತಪಡಿಸಿದರು.

Kavi-2
ಬೆಂಗಳೂರಿನ ಜಯನಗರದ ಯುವಕ ಸಂಘದ ವಿವೇಕ ಆಡಿಟೋರಿಯಂನಲ್ಲಿ ಉಡುಪಿಯ ಕಾವಿ ಆರ್ಟ್​ ಫೌಂಡೇಷ್​ನ್​ ಹಾವಂಜೆ, ಆರ್ಟ್​ ಮ್ಯಾರ್ಟಸ್​ ಬೆಂಗಳೂರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರಾವಳಿಯ ಕಾವಿ ಕಲೆ ಮತ್ತು ಯಕ್ಷಗಾನ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಯಕ್ಷಗಾನದ ಅಂತರ್​ ಶಿಸ್ತು ಮರು ದಾಖಲಿಸುವ ಈ ವಿಚಾರ ಸಂಕಿರಣವು ಮೈಲಿಗಲ್ಲಾಗಲಿದೆ ಎಂದರು.

ಯುವಕ ಸಂಘದ ಮಾರ್ಗದರ್ಶಕ ಜಿ.ಆರ್​. ಜಗದೀಶ್​, ಆಡಳಿತ ಮಂಡಳಿ ಸದಸ್ಯರಾದ ಡಾ. ಗೌರೀಶ್​ ಜೋಷಿ, ಬೆಂಗಳೂರು ಆರ್ಟ್​ ಗ್ಯಾಲರಿಯ ಸಂಯೋಜಕ ಶಿವಪ್ರಸಾದ್​, ಕಾವಿ ಆರ್ಟ್​ ಫೌಂಡೇಷನ್​ನ ಅಧ್ಯಕ್ಷ ಹಾವಂಜೆ ಮಂಜುನಾಥ ರಾವ್​ ಉಪಸ್ಥಿತರಿದ್ದರು.

ಸಂಪ್ರದಾಯ-ವಿನ್ಯಾಸ ವಿಚಾರ ಸಂಕಿರಣ

ಉಡುಪಿಯ ಪಿಪಿಸಿ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಕುಮಾರ್​ ಅಳಗೋಡು ಯಕ್ಷಗಾನ ಸಂಪ್ರದಾಯ ಹಾಗೂ ಹಿನ್ನೆಲೆ, ಲೇಖಕ ಮತ್ತು ವಿನ್ಯಾಸಗಾರ ಡಾ. ವಿಶ್ವನಾಥ ಎ.ಎಸ್​. ಯಕ್ಷಗಾನ ವೇಷಭೂಷಣ ಮತ್ತು ಮುಖವರ್ಣಿಕೆ ಹಾಗೂ ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ ಕಾವಿ ಕಲೆ ಮತ್ತು ಯಕ್ಷಗಾನ ವಿನ್ಯಾಸದಲ್ಲಿನ ಸಾಮ್ಯತೆ ಕುರಿತು ವಿಚಾರ ಮಂಡಿಸಿದರು.

Kavi-3

'ಶ್ರೀಕೃಷ್ಣ ಸಂಧಾನ' ಯಕ್ಷಗಾನ ತಾಳಮದ್ದಳೆ

ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರಿಂದ ಕವಿ ದೇವದಾಸ ವಿರಚಿತ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನೆರವೇರಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಹೆಗಡೆ ಮಾಗೋಡು, ಮದ್ದಳೆಯಲ್ಲಿ ವೆಂಕಟೇಶ್​ ಹೆಗಡೆ, ಚಂಡೆಯಲ್ಲಿ ಕಾರ್ತಿಕ್​ ಧಾರೇಶ್ವರ, ಮುಮ್ಮೇಳದಲ್ಲಿ ಕೃಷ್ಣನಾಗಿ ಡಾ. ಶಿವಕುಮಾರ್​ ಅಳಗೋಡು, ಕೌರವನಾಗಿ ಹಾವಂಜೆ ಮಂಜುನಾಥ ರಾವ್​ ಹಾಗೂ ವಿದುರನಾಗಿ ಆದಿತ್ಯ ಹಾಲ್ಕೋಡು ಭಾಗವಹಿಸಿದ್ದರು.

ಬೆಂಗಳೂರಿನ ಜಯನಗರದ ಯುವ ಪಥದ ಬೆಂಗಳೂರು ಆರ್ಟ್​ ಗ್ಯಾಲರಿಯಲ್ಲಿ ಡಿ.8ರ ವರೆಗೂ ಕಾವಿ ಕಲೆಯ ಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ. 'ಕಾವ್ಯರೇಖಾ' ಕಾವಿ ಕಲಾ ಪ್ರದರ್ಶನದ ಭಾಗವಾಗಿ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ. | ಡಾ. ಜನಾರ್ದನ್​ ರಾವ್​ ಹಾವಂಜೆ. ಕಾವಿ ಕಲಾವಿದ ಅತಿಥಿ ಕಲಾವಿದರಿಂದ ಕವಿ ದೇವದಾಸ ವಿರಚಿತ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net