ವಿಚಾರ ಸಂಕಿರಣ 4ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿಶ್ವ ವಿದ್ಯಾಲಯವು ಜ. 4ರಂದು ಬೆಳಗ್ಗೆ 10 ಗಂಟೆಗೆ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಡಾ.ಡಿ.ಸಿ.ಪಾವಟೆ ಮೆಮೋರಿಯಲ್​ ಪ್ರತಿಷ್ಠಾನದ ಬೆಳ್ಳಿ ಮಹೋತ್ಸವ ಪ್ರಯುಕ್ತ ಪ್ರತಿಷ್ಠಾನ ವತಿಯಿಂದ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಕ್ಯಾಂಬ್ರಿಡ್ಜ್​ ವಿಶ್ವ ವಿದ್ಯಾಲಯದ ಸಿಡ್ನಿ ಸಸೆಕ್ಸ್​ ಕಾಲೇಜಿನ ಪ್ರೊ. ಮಾರ್ಟಿನ್ ಬಿ. ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಯಾಗಿ ಕ್ಯಾಂಬ್ರಿಡ್ಜ್​ ವಿಶ್ವ ವಿದ್ಯಾಲಯದ ಪ್ರೊ.ಜೇಮ್ಸ್​ ಮಯಾಲ್​ ಮತ್ತು ನವ ದೆಹಲಿ ಸುಪ್ರಿಂ ಕೋರ್ಟ್​ನ ಹಿರಿಯ ವಕೀಲ ಶರದ್​ ಜವಳಿ ಭಾಗವಹಿಸಲಿದ್ದಾರೆ. ಕವಿವಿ ಕುಲಪತಿ ಡಾ. ಬಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಪ್ರೊ.ಜೇಮ್ಸ್​ ಮಯಾಲ್​, ಪ್ರೊ.ಗೋವಿಂದರಾವ್​, ಪ್ರೊ.ವೆಂಕಪ್ಪಯ್ಯ ದೇಸಾಯಿ, ಡಾ.ಎಡ್ವರ್ಡ್​ ವಿಲ್ಸನ್​ ಲೀ ಅವರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಡಾ.ಅಶ್ವಿನಿ ಗೋಯಾಲ್​ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಸಂಯೋಜಕ ಡಾ.ಬಿ.ಎಚ್​.ನಾಗೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net