

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಚುಕ್ಕಿ ಕಲ್ಯಾಣ ಮಂಟಪದಲ್ಲಿ ಮಾ.೨೮ ರಂದು ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘದಿAದ ಮಹಿಳಾ ವಿಚಾರ ಸಂಕಿರಣ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಲಾಗುವುದೆಂದು ಎಂಎAಎಸ್‌ನ ಮಹಿಳಾ ಸಂಘದ ರಾಜ್ಯಾಧ್ಯಕ್ಷ ವಿಜಯರಾಣಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರಿಗೆ ತಮ್ಮ ಹಕ್ಕುಗಳು, ಸಮಾಜದಲ್ಲಿ ಇರುವ ಸಮಾನ ಬದುಕುವ ಹಕ್ಕಿನ ಕುರಿತು ತಿಳಿಸಲು ಮಹಿಳಾ ನಡೆ ಸಂವಿಧಾನ ಕಡೆ ಎಂಬ ಘೋಷವಾಕ್ಯದಡಿ ಸಂವಿಧಾನ ಮತ್ತು ಸಮಾನತೆಯಲ್ಲಿ ಮಹಿಳೆ ಎಂಬ ವಿಷಯದ ಕುರಿತು ಮಹಿಳಾ ವಿಚಾರ ಸಂಕಿರಣವನ್ನು ಹಮ್ಮಿಕೊ ಳ್ಳಲಾಗಿದೆ.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಕ್ರಾಂತಿಕಾರಿ ಮಹಿಳಾ ಹೋರಾಟಗಾರರಾದ ಮಲ್ಲಿಗೆ ಸಿರಿಮನಿ, ಕೆ.ಸಿ.ಅಕ್ಷತಾ, ನಾಗಮಣಿ, ಹೋರಾಟಗಾರರಾದ ಎಚ್.ಎನ್. ಬಡಿಗೇರ್, ಆರ್.ಮಾನಸಯ್ಯ,
ಈರಮ್ಮ, ಅವಾನಿಕ, ಸಿ.ದಾನಪ್ಪ ನೀಲೋಗಲ್, ಕರಿಯಪ್ಪ ಎಂ.ಡಿ. ತೋರಣದಿನ್ನಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಿರ್ಮಲಾ, ನಾಗರತ್ನ ಕಟ್ಟಿಮನಿ, ಮೌನೇಶಮ ಚನ್ನಬಸವ, ರೇಣುಕಮ್ಮ, ಪದ್ಮಾ ಇದ್ದರು.