ಕೆಸಿಸಿಐನಲ್ಲಿ ವಿಚಾರ ಸಂಕಿರಣ

Published on

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಭಾರತೀಯ ಶಿಣ ಮಂಡಳ ಮತ್ತು ದೈವ ವಿದ್ಯಾವರ್ಧಕ ಸಂದ ಸಹಯೋಗದೊಂದಿಗೆ ಜೂನ್ 8ರಂದು ಬೆಳಗ್ಗೆ 10ಕ್ಕೆ "12ನೇ ತರಗತಿ ನಂತರ ವೃತ್ತಿ ಆಯ್ಕೆಗಳನ್ನು ಅನ್ವೇಷಿಸುವುದು' ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಸೆಮಿನಾರನಲ್ಲಿ 12ನೇ ತರಗತಿ ವಿದ್ಯಾಥಿರ್ಗಳಿಗೆ ಭವಿಷ್ಯದ ವೃತ್ತಿ ಜೀವನದ ಹಾದಿಯನ್ನು ಆತ್ಮವಿಶ್ವಾಸದಿಂದ ಮುನ್ನಡೆಯಲು ಮಾರ್ಗದರ್ಶನ ಸಿಗಲಿದೆ. ಖ್ಯಾತ ಶಿಣ ತರು ಹಾಗೂ ಕೊಲ್ಲಾಪುರ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ವೆಂಕಟೇಶ್ ರಾಯ್ಕರ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ.

ಆಸಕ್ತರು, ವಿಚಾರ ಸಂಕಿರಣದ ಸದುಪಯೋಗ ಪಡೆಯಬೇಕೆಂದು ಸಂಸ್ಥೆಯ ಅಧ್ಯ ಎಸ್.ಪಿ. ಸಂಶಿಮಠ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net