ಸೆಮಿಗೆ ವಾಲ್‌ಪರಿ ಎಫ್.ಸಿ., ಮಿಡ್‌ಸಿಟಿ, ಎನ್‌ವೈಸಿ, ಬೆಟ್ಟಗೇರಿ ಎಫ್.ಸಿ.ಲಗ್ಗೆ

23sunti01
ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ಹಾಗೂ ಮಿಡ್‌ಸಿಟಿ ಸುಂಟಿಕೊಪ್ಪ ತಂಡಗಳ ನಡುವೆ ನಡೆದ ಪಂದ್ಯಾವಳಿ.
Published on

ಸುಂಟಿಕೊಪ್ಪ: ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 6ನೇ ದಿನವಾದ ಶುಕ್ರವಾರ ನಡೆದ ಪುಟ್ಬಾಲ್ ಪಂದ್ಯಾವಳಿಯ ಹಣಾಹಣಿಯಲ್ಲಿ ವಾಲ್‌ಪರಿ ಎಫ್.ಸಿ.ತಮಿಳುನಾಡು, ಮಿಡ್‌ಸಿಟಿ ಸುಂಟಿಕೊಪ್ಪ, ಎನ್‌ವೈಸಿ ಕೊಡಗರಹಳ್ಳಿ ಹಾಗೂ ಬೆಟ್ಟಗೇರಿ ಎಫ್.ಸಿ.ಸುಂಟಿಕೊಪ್ಪ ತಂಡಗಳು ಸೆಮಿಪೈನಲ್‌ಗೆ ಲಗ್ಗೆಯಿಟ್ಟವು.

ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಿರುವ ಫುಟ್ಬಾಲ್ ಮೊದಲನೇ ಪಂದ್ಯಾವಳಿಯು ವಾಲ್‌ಪರಿ ಎಫ್.ಸಿ.ತಮಿಳುನಾಡು ಹಾಗೂ ಇಕೆಎನ್ ಎಫ್.ಸಿ.ಕೋಳಿಕಡಾವು ಇರಿಟಿ ಕಣ್ಣೂರು ತಂಡಗಳ ನಡುವೆ ಪಂದ್ಯಾವಳಿ ನಡೆಯಬೇಕಿತ್ತು. ಇಕೆಎನ್ ಎಫ್.ಸಿ.ಕೋಳಿಕಡಾವು ಇರಿಟಿ ಕಣ್ಣೂರು ಬಾರದ ಹಿನ್ನೆಲೆಯಲ್ಲಿ ವಾಕ್ ಓವರ್ ಮೂಲಕ ವಾಲ್‌ಪರಿ ಎಫ್.ಸಿ. ತಮಿಳುನಾಡು ಸೆಮಿಪೈನಲ್‌ಗೆ ಲಗ್ಗೆಯಿಟ್ಟಿತು.

ದ್ವಿತೀಯ ಪಂದ್ಯಾವಳಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ಹಾಗೂ ಮಿಡ್‌ಸಿಟಿ ಸುಂಟಿಕೊಪ್ಪ ತಂಡಗಳ ನಡುವೆ ನಡೆದ ಪಂದ್ಯಾವಳಿಯ ಮೊದಲಾರ್ಧದ ಸುಂಟಿಕೊಪ್ಪ ಮಿಡ್‌ಸಿಟಿ ತಂಡದ ಮುನ್ನಡೆ ಆಟಗಾರ 18ನೇ ನಿಮಿಷದಲ್ಲಿ ಪಾಂಡ್ಯನ್ ತನಗೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎದುರಾಳಿ ತಂಡಕ್ಕೆ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ಆದರೆ ಎರಡು ತಂಡಗಳು ಬಿರುಸಿನ ಆಟವನ್ನು ಪ್ರದರ್ಶಿಸಿದರು. ಎದುರಾಳಿ ತಂಡದವರು ಗೋಲು ಗಳಿಸುವಲ್ಲಿ ವಿಫಲರಾದರು.

ದ್ವಿತೀಯಾರ್ಧದ 8ನೇ ನಿಮಿಷದಲ್ಲಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ ಮುನ್ನಡೆ ಆಟಗಾರ ಕಿರಣ್ 1 ಗೋಲು ಗಳಿಸುವ ಮೂಲಕ ಎದುರಾಳಿ ತಂಡದ ಮುನ್ನಡೆಯನ್ನು ಸಮಾನಂತರಗೊಳಿಸಿದರು. ಆದರೆ ಎದುರಾಳಿ ತಂಡದ ಮೇಲೆ ಬಿರುಸಿನ ಆಟಕ್ಕೆ ಇಳಿದ ಮಿಡ್‌ಸಿಟಿ ತಂಡದ ಮುನ್ನಡೆ ಆಟಗಾರ ಶಬ್ಬೀರ್ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆಗೆ ಮುಂದಾದರು. ಮಿಡ್‌ಸಿಟಿ ತಂಡದ ಮುನ್ನಡೆ ಆಟಗಾರ ದಿವಾಕರ 16ನೇ ನಿಮಿಷದಲ್ಲಿ 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಮತ್ತಷ್ಟು ಒತ್ತಡವನ್ನು ಹೇರಿದ್ದರು. ಮಿಡ್‌ಸಿಟಿ ತಂಡದ ಮುನ್ನಡೆ ಆಟಗಾರನಾದ ಶಬ್ಬಿರ್‌ಗೆ 18ನೇ ನಿಮಿಷದಲ್ಲಿ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತ್ತೊಂದು ಗೋಲು ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಮತ್ತಷ್ಟು ಒತ್ತಡವನ್ನು ಹೇರಿದರು. ಮಿಡ್‌ಸಿಟಿ ತಂಡದ ಮಧ್ಯಕ್ರಮಾಂಕದ ಆಟಗಾರ ವಿಜು ಅವರಿಗೆ 19ನೇ ನಿಮಿಷದಲ್ಲಿ ಮತ್ತೊಂದು ಅವಕಾಶ ದೊರೆತು 1 ಗೋಲುಗಳಿಸುವ ಮೂಲಕ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡವನ್ನು 5-1 ಗೋಲುಗಳಿಂದ ಸೋಲಿಸುವ ಮೂಲಕ ಮಿಡ್‌ಸಿಟಿ ಸುಂಟಿಕೊಪ್ಪ ತಂಡವು ಸೆಮಿಫೈನಲ್ ದ್ವಿತೀಯ ತಂಡವಾಗಿ ಲಗ್ಗೆಯಿತ್ತು.

ಮೂರನೇ ಪಂದ್ಯಾವಳಿಯು ಟಿಡಿಎಲ್ ಎಫ್.ಸಿ.ಬೈಲಕುಪ್ಪೆ ಹಾಗೂ ಎನ್‌ವೈಸಿ ಕೊಡಗರಹಳ್ಳಿ ತಂಡಗಳ ನಡುವೆ ನಡೆದು ಎರಡು ತಂಡಗಳು ಪ್ರಥಮ ಮತ್ತು ದ್ವಿತೀಯಾರ್ಧದಲ್ಲಿ ಸಮಬಲದ ಪ್ರದರ್ಶನ ನೀಡುವುದರೊಂದಿಗೆ ಎರಡು ತಂಡಗಳಿಗೂ ಹತ್ತು ಹಲವು ಅವಕಾಶಗಳು ದೊರೆತರೂ ಪಂದ್ಯಾವಳಿಯಲ್ಲಿ ಗೋಲು ಗಳಿಸಿಕೊಳ್ಳಲು ವಿಫಲಗೊಂಡ ಹಿನ್ನೆಲೆಯಲ್ಲಿ ಟ್ರೈಬ್ರೇಕರ್‌ನಲ್ಲಿ ಟಿಡಿಎಲ್ ಎಫ್.ಸಿ.ಬೈಲಕುಪ್ಪೆ 2 ಹಾಗೂ ಎನ್‌ವೈಸಿ ಕೊಡಗರಹಳ್ಳಿ ತಂಡ 4 ಗೋಲು ಗಳಿಸುವ ಮೂಲಕ ಎನ್‌ವೈಸಿ ಕೊಡಗರಹಳ್ಳಿ ತಂಡವು 3ನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.

ನಾಲ್ಕನೇ ಪಂದ್ಯಾವಳಿಯು ಬೆಟ್ಟಗೇರಿ ಎಫ್.ಸಿ.ಸುಂಟಿಕೊಪ್ಪ ಹಾಗೂ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡಗಳ ನಡುವೆ ನಡೆದು 2 ತಂಡಗಳು ಪ್ರಥಮಾರ್ಧದಲ್ಲಿ ಸಮಬಲದ ಪ್ರದರ್ಶವನ್ನು ನೀಡಿತ್ತು 2 ತಂಡಗಳಿಗೂ ಹತ್ತು ಹಲವು ಅವಕಾಶಗಳು ದೊರೆತರೂ ಗೋಲುಗಳಿಸುವಲ್ಲಿ ವಿಫಲಗೊಂಡಿತು.

ದ್ವಿತೀಯಾರ್ಧದಲ್ಲಿ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡದ ಆಟಗಾರ ಎಸಗಿದ ತಪ್ಪಿನಿಂದಾಗಿ ಪೆನಾಲ್ಟಿಸ್ಟ್ರೋಕ್ ನೀಡಲಾಗಿದ್ದು ಬೆಟ್ಟಗೇರಿ ಎಫ್.ಸಿ.ತಂಡಕ್ಕೆ ದೊರೆತ್ತಿದ್ದು ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡ ಮನೋಜ್ ಗೋಲುಗಳಿಸುವ ಎದುರಾಳಿ ತಂಡದ ಮುನ್ನಡೆಯನ್ನು ಕಾಯ್ದುಕೊಂಡರು. ಪಂದ್ಯಾವಳಿಯ ಕೊನೆಯ ನಿಮಿಷದಲ್ಲಿ ಬೆಟ್ಟಗೇರಿ ತಂಡದ ಮಂಜು 1 ಗೋಲು ಗಳಿಸುವುದರೊಂದಿಗೆ 2-0 ಗೋಲುಗಳಿಂದ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡವನ್ನು ಸೋಲಿಸುವ ಮೂಲಕ ಬೆಟ್ಟಗೇರಿ ಎಫ್.ಸಿ. ತಂಡ 4ನೇ ತಂಡವಾಗಿ ಸೆಮಿಪೈನಲ್‌ಗೆ ಲಗ್ಗಯಿಟ್ಟಿತ್ತು.

ಪ್ರಥಮ ಪಂದ್ಯಾವಳಿಯನ್ನು ಸುಂಟಿಕೊಪ್ಪ ಟಿಂಬರ್ ವ್ಯಾಪಾರಿ ವಿಲಿಯಂ, ಹಾಗೂ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಕೆ.ಮೋಹನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಹಿರಿಯ ಪುಟ್ಬಾಲ್ ಆಟಗಾರರ ವಹೀದ್‌ಜಾನ್ ಉದ್ಘಾಟಿಸಿದರು. ಬ್ಲೂಬಾಯ್ಸ ಯುವಕ ಸಂಘದ ಅಧ್ಯಕ್ಷ ಆಲಿಕುಟ್ಟಿ, ಗೌರವಧ್ಯಕ್ಷ ಟಿ.ಯು.ಪ್ರಸನ್ನ, ಅನಿಲ್, ಹಮೀದ್ ಇತರರು ಇದ್ದರು.

ಇಂದಿನ ಸೆಮಿಫೈನಲ್ ಪಂದ್ಯ ಮೊದಲ ಸೆಮಿಫೈನಲ್ ಪಂದ್ಯ 3.00 ಗಂ. ವಾಲ್‌ಪರಿ ಎಫ್.ಸಿ ತಮಿಳುನಾಡು / ಮಿಡ್‌ಸಿಟಿ ಸುಂಟಿಕೊಪ್ಪ ದ್ವಿತೀಯ ಸೆಮಿಫೈನಲ್ ಪಂದ್ಯ 4.00. ಗಂ. ಎನ್‌ವೈಸಿ ಕೊಡಗರಹಳ್ಳಿ / ಬೆಟ್ಟಗೇರಿ ಎಫ್.ಸಿ.ಸುಂಟಿಕೊಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net