ಮೈಸೂರಿನಲ್ಲಿ ಸೆಮಿಕಂಡಕ್ಟರ್ ಯೋಜನೆ

Published on

ಮೈಸೂರು: ಗುಜರಾತ್ ಕಾರಣದಿಂದ ಮೈಸೂರಿನಲ್ಲಿ ಕೈತಪ್ಪಲಿದ್ದ ಸೆಮಿಕಂಡಕ್ಟರ್ ಯೋಜನೆಯನ್ನು ತಮ್ಮ ಸತತ ಪ್ರಯತ್ನದ ಫಲವಾಗಿ ಮೈಸೂರು ನಗರದಲ್ಲಿ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಜಪಾನಿನ ಸಂಸ್ಥೆ ಮುಂದಿನ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಿದೆ ಎಂದು ಉದ್ದೇಶಿತ ಹಾಸನ ಮೆಗಾ ಫುಡ್ ಪಾರ್ಕ್ ಸಿಇಒ ಅಶೋಕ್ ಹೇಳಿದರು.

ಬೆಂಗಳೂರಿನಲ್ಲಿ ಫೆ.2ರಿಂದ 14ರವರೆಗೆ ನಡೆಯುವ ವಿಶ್ವ ಹೂಡಿಕೆ ಸಮ್ಮೇಳನದಲ್ಲಿ ಇದಕ್ಕಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ನಗರದ ಕಡಕೊಳ ಬಳಿ ಸೆಮಿಕಂಡಕ್ಟರ್ ಘಟಕ ಆರಂಭಿಸುವ ಉದ್ದೇಶವಿದೆ. ಘಟಕ ಆರಂಭವಾದರೆ 200ಕ್ಕೂ ಹೆಚ್ಚು ಕನ್ನಡಿಗರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net