

ಸುಳ್ಯ: ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಗೌಡ ಸಮಿತಿ ಸಹಯೋಗದೊಂದಿಗೆ ಡಿ.1ರಂದು ಗಡಿಗ್ರಾಮ ಮಂಡೆಕೋಲಿನಲ್ಲಿ ಅರೆಭಾಷೆ ಗಡಿನಾಡ ಉತ್ಸವ ನಡೆಯಲಿದ್ದು, ಕಾರ್ಯಕ್ರಮದ ಕುರಿತಂತೆ ಪೂರ್ವಭಾವಿ ಸಭೆ ಮಂಡೆಕೋಲಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನ.18ರಂದು ಪೇರಾಲಿನಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೆ ದಿನಾಂಕ ನಿಗದಿಪಡಿಸುವ ಬಗ್ಗೆ ಚರ್ಚಿಸಲಾಯಿತು. ವಿವಿಧ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಯಿತು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ವಿವಿಧ ಸಮಿತಿಗಳ ಕರ್ತವ್ಯ, ಜವಾಬ್ದಾರಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು. ಸದಸ್ಯರಾದ ಡಾ.ಜ್ಞಾನೇಶ್ ಎನ್.ಎ., ಲೋಕೇಶ್ ಊರುಬೈಲು, ಗೌಡ ಸಮಿತಿಯ ಪದಾಧಿಕಾರಿಗಳಾದ ವಿನುತಾ ಪಾತಿಕಲ್ಲು, ಶಿವಪ್ರಸಾದ್ ಉಗ್ರಾಣಿಮನೆ, ದಾಮೋದರ್, ದಿವ್ಯಲತಾ ಚೌಟಾಜೆ ಉಪಸ್ಥಿತರಿದ್ದರು.