ನಿಟ್ಟೆ ಮಹಾವಿದ್ಯಾಲಯದಲ್ಲಿ ಸೆಮಾಫೋರ್ ಉತ್ಸವ

blm
Published on

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದಿಂದ ವಾರ್ಷಿಕ ಉತ್ಸವ ಸೆಮಾಫೋರ್ ಇತ್ತೀಚೆಗೆ ನಡೆಯಿತು. ಎಚ್.ಪಿ ಎಂಟರ್‌ಪ್ರೈಸಸ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಪ್ರಧಾನ ಸಾಫ್ಟ್‌ವೇರ್ ಇಂಜಿನಿಯರ್ ಅಭಿಲಾಷ್ ಯು.ಕೆ. ಮಾತನಾಡಿ, ಹೊಸ ತಂತ್ರಜ್ಞಾನ ಹಾಗೂ ಐಟಿ ಉದ್ಯಮದಲ್ಲಿನ ಅವಕಾಶಗಳು ಹಾಗೂ ವಿವಿಧ ವಿಚಾರಗಳ ಕುರಿತು ಮಾಹಿತಿ ನೀಡಿದರು.

ತಾಂತ್ರಿಕ ಕಾಲೇಜಿನ ಮುಖ್ಯಸ್ಥ (ಸಂಶೋಧನೆ ಮತ್ತು ಅಭಿವೃದ್ಧಿ) ಡಾ.ಸುದೇಶ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಎಂಸಿಎ ವಿಭಾಗ ಮುಖ್ಯಸ್ಥೆ ಡಾ.ಮಮತಾ ಸ್ವಾಗತಿಸಿದರು. ಸೆಮಾಫೋರ್ ಸಂಯೋಜಕ ಡಾ.ಅನಂತಮೂರ್ತಿ, ಅಧ್ಯಕ್ಷ ಕಿರಣ್, ಕಾರ್ಯದರ್ಶಿ ರಕ್ಷಿತಾ, ತಾಂತ್ರಿಕ ಸಂಯೋಜಕ ಅನೂಪ್ ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net