

ಮಂಡ್ಯ: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಾದ ಮಂಡ್ಯ, ಪೂರಿಗಾಲಿ, ಗಾಮನಹಳ್ಳಿ, ಮುರುಕನಹಳ್ಳಿ, ನಾಯಕನಹಳ್ಳಿ, ಜವರನಹಳ್ಳಿ, ಮಲ್ಲಸಂದ್ರಕಾವಲ್ ಗಂಜಾಂ ತೋಟಗಾರಿಕೆ ಕ್ಷೇತ್ರಗಳಲ್ಲಿ ವಿವಿಧ ಅಲಂಕಾರಿಕ ಗಿಡಗಳು, ಉತ್ತಮ ಜಾತಿಯ ತೆಂಗು, ಮಾವು, ಸಪೋಟ, ಸೀಬೆ, ಕರಿಬೇವು, ಅಡಿಕೆ ಮತ್ತು ಅಂಜೂರ ಕಸಿ /ಸಸಿಗಳನ್ನು ಖರೀದಿಸಬಹುದಾಗಿದೆ.
ತೆಂಗು 75 ರೂ, ಮಾವು 42 ರೂ, ಸಪೋಟ 56 ರೂ, ಸೀಬೆ 46 ರೂ, ಅಂಜೂರ ಹಾಗೂ ಅಡಿಕೆ 25 ರೂ ಇಲಾಖಾ ಮಾರಾಟ ದರದಲ್ಲಿ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.