ಜಿಂಕೆ ಕೊಂಬು, ಆನೆ ದಂತ ಸೇಲ್​ ಮಾಡುತ್ತಿದ್ದ ಐವರು ಅರೆಸ್ಟ್

Selling Elephant
Published on

ಬೆಂಗಳೂರು: ವನ್ಯ ಜೀವಿಗಳ ಕಾನೂನಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು ಮಾಂಸ, ಚರ್ಮ ಹಾಗೂ ಇನ್ನಿತರ ಪಳಯುಳಿಕೆಗಳನ್ನು ಮಾರಾಟ ಮಾಡುವುದು, ಖರೀದಿಸುವುದು ಹಾನೂನು ಬಾಹೀರವಾಗಿದೆ. ಹೀಗಿರುವಾಗ ಅಕ್ರಮವಾಗಿ ಜಿಂಕೆ ಕೊಂಬು, ಆನೆ ದಂತ ಮಾಂಸ ಮಾರುತ್ತಿದ್ದ ಐವರು ಆರೋಪಿಗಳು ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಆರೋಪಿಗಳು ವೈಯಾಲಿ ಕಾವಲ್ 18ನೇ ಕ್ರಾಸ್ ಹಾಗೂ ಗುಟ್ಟಹಳ್ಳಿ ಸರ್ಕಲ್ ಬಳಿ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಹೀಗಿರುವಾಗ ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಸೇರಿದಂತೆ ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕನಕಪುರ ಹಾಗೂ ಮೈಸೂರು ಮೂಲದ ಚಂದ್ರಶೇಖರ್, ರಂಗಸ್ವಾಮಿ, ಲೋಕೇಶ್, ಶೇಖರ್ ಹಾಗೂ ರೈಮಂಡ್ ಬಂಧಿತ ಆರೋಪಿಗಳು. ಬಂಧಿತರಿಂದ 5 ಲಕ್ಷ ಮೌಲ್ಯದ ಆನೆ ದಂತ, 12 ಲಕ್ಷ ಮೌಲ್ಯದ 12 ಜಿಂಕೆ ಕೊಂಬು ಹಾಗೂ 10 ಲಕ್ಷ ಮೌಲ್ಯದ ಎರಡು ತಲೆಯ ಎರಡು ಹಾವುಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net