ತೋಟಗಾರಿಕೆ ಇಲಾಖೆಯಿಂದ ತೆಂಗಿನ ಸಸಿ ಮಾರಾಟ: ನರೇಗಾದಲ್ಲಿ ಸಹಾಯಧನವೂ ಲಭ್ಯ

coconut-farm
Published on

ಮಂಡ್ಯ: ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ತೆಂಗಿನ ಗಿಡಗಳು ಮಾರಾಟಕ್ಕೆ ಲಭ್ಯವಿದೆ.

ಇಲಾಖೆಯಿಂದ ಉತ್ತಮ ಗುಣಮಟ್ಟದ ತೆಂಗಿನ ಗಿಡಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಪ್ರತಿ ತೆಂಗಿನ ಗಿಡಕ್ಕೆ 75 ರೂ ನಿಗದಿಪಡಿಸಲಾಗಿದೆ. ಆಸಕ್ತರು ಪಹಣಿ ಮತ್ತು ಆಧಾರ್‌ಕಾರ್ಡ್ ನೀಡಿ ಖರೀದಿ ಮಾಡಬಹುದು. ಇನ್ನು ತೋಟಗಾರಿಕೆ ಇಲಾಖೆಯಿಂದಲೇ ಖರೀದಿಸಿ ನಾಟಿ ಮಾಡಿದಲ್ಲಿ ನರೇಗಾ ಮತ್ತು ಸಿಡಿಬಿ ಯೋಜನೆಯಡಿ ಸಹಾಯಧನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net