

ಬೆಂಗಳೂರು: ಈ ಮನೆಯಲ್ಲಿ ಒಂದೂವರೆ ವರ್ಷದೊಳಗೆ ಮೂವರ ಸರಣಿ ಸಾವಾಯ್ತು. ಮನೆಯಲ್ಲಿ ಏನೋ ದೋಷ ಇರಬಹುದೆಂದು ಭಾವಿಸಿದ ಆ ಮನೆಯ ಮಗ ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೆಲತಿಂಗಳ ಬಳಿಕ ಮನೆ ಬಳಿಗೆ ಬಂದಾಗ ಆ ಮನೆಯಲ್ಲಿದ್ದವರನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಉದ್ಯಮಿ ಪ್ರಶಾಂತ್ ಕುಮಾರ್(34) ಅವರ ತಾಯಿ ಉಷಾರಾಣಿ ಕೆಲ ವರ್ಷಗಳ ಹಿಂದೆ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ಸ್ವಂತ ಮನೆ ಖರೀದಿಸಿದ್ದರು. ಇದೇ ಮನೆಯಲ್ಲಿ ಪ್ರಶಾಂತ್ ಕುಟುಂಬ ಸಮೇತ ವಾಸಿಸುತ್ತಿದ್ದರು. 2007ರಲ್ಲಿ ಪ್ರಶಾಂತ್ ತಾಯಿ ಹಾಗೂ ಹಿರಿಯ ಅಣ್ಣ ಮೃತಪಟ್ಟಿದ್ದರು. 2008ರಲ್ಲಿ ಅಜ್ಜಿ ಕೂಡ ನಿಧನರಾದರು. ಇದರಿಂದ ಆತಂಕಗೊಂಡ ಪ್ರಶಾಂತ್, ದೋಷದಿಂದ ಈ ಸಾವುಗಳು ಸಂಭವಿಸುತ್ತಿರಬಹುದು ಎಂದು ಭಾವಿಸಿ ಸ್ವಲ್ಪ ಸಮಯದ ಮಟ್ಟಿಗೆ ಬೇರೆ ಮನೆಯಲ್ಲಿ ವಾಸ ಮಾಡಲು ನಿರ್ಧರಿಸಿದರು. ಅದರಂತೆ ಕೆ.ಪಿ. ಅಗ್ರಹಾರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದರು. ಇತ್ತೀಚೆಗೆ ಮತ್ತೆ ಹೊಸೂರಿನಲ್ಲಿರುವ ಮನೆಗೆ ಮರಳಿದಾಗ ಆ ಮನೆಯಲ್ಲಿ ಅಪರಿಚಿತರು ವಾಸಿಸುತ್ತಿದ್ದರು. ಅಷ್ಟೇ ಅಲ್ಲ ಪ್ರಶಾಂತ್ಗೆ ಗೊತ್ತಿಲ್ಲದೆಯೇ ಆ ಮನೆ ಬೇರೆಯವರಿಗೆ ಮಾರಾಟವಾಗಿತ್ತು. ಈ ಕೃತ್ಯವೆಸಗಿದ್ದು ಯಾರು ಗೊತ್ತಾ? ಇದನ್ನೂ ಓದಿರಿ ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!
ಪ್ರಶಾಂತ್ರ ಮನೆಯನ್ನು ಅವರಿಗೇ ತಿಳಿಯದಂತೆ ಮಾರಾಟ ಮಾಡಿದ್ದು ಚಿಕ್ಕಮ್ಮ ಜಾನ್ಸಿ ರಾಣಿ. ಪ್ರಶಾಂತ್ ಮನೆ ಬದಲಾವಣೆ ಮಾಡುವ ಸಮಯದಲ್ಲಿ ಇವರ ತಾಯಿ ಉಷಾರಾಣಿ ಹೆಸರಿನಲ್ಲಿದ್ದ ಮನೆಯ ದಾಖಲೆಗಳನ್ನು ಜಾನ್ಸಿ ರಾಣಿ ಹಾಗೂ ಇವರ ಪತಿ ಕುಮಾರ್ ಪಡೆದುಕೊಂಡಿದ್ದರು. ನಂತರ ತಾವೇ ಮನೆಯ ಮಾಲೀಕರೆಂದು ಬಿಂಬಿಸಿ ದಾಖಲೆ ದುರುಪಯೋಗ ಪಡಿಸಿಕೊಂಡು ಸುಬ್ರಹ್ಮಣಿ ಎಂಬುವವರಿಗೆ ಮಾರಾಟ ಮಾಡಿದ್ದರು. ಹಾಗಾಗಿ ಪ್ರಶಾಂತ್, ಹಲಸೂರು ಗೇಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಬಾವಿ ನಿವಾಸಿ ಜಾನ್ಸಿ ರಾಣಿ(46), ಕುಮಾರ್(52) ಎಂಬುವವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.