ರೋಟರಿಯಿಂದ ನಿಸ್ವಾರ್ಥ ಸಮಾಜ ಸೇವೆ

20ss2Rotarians
ಆಲೂರುಸಿದ್ದಾಪುರ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಪ್ರಕಾಶ್ ಕಾರಂತ್ , ಉಲ್ಲಾಸ್ ಕೃಷ್ಣ, ರಾಮಣ್ಣ, ದಯಾನಂದ್, ನಾರಾಯಣ ಸ್ವಾಮಿ, ಕಿರಣ್ ಇದ್ದರು.
Published on

ಶನಿವಾರಸಂತೆ: ರೋಟರಿ ಸಂಸ್ಥೆಯ ಸದಸ್ಯರು ಹೃದಯವಂತರಾಗಿದ್ದು ಈ ಮೂಲಕ ನಿಸ್ವಾರ್ಥವಾಗಿ ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ರೋಟರಿ ಸಂಸ್ಥೆಯ ಮೇಜರ್ ಡೋನರ್ ಮತ್ತು ರೋಟರಿ ಪದಗ್ರಹಣ ಅಧಿಕಾರಿ ಪ್ರಕಾಶ್ ಕಾರಂತ್ ಅಭಿಪ್ರಾಯ ಪಟ್ಟರು.

ಆಲೂರು ಸಿದ್ದಾಪುರದ ವೈಭವ್ ಕನ್ವೆನ್ಷನ್ ಸಭಾಂಗಣದಲ್ಲಿ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.

ಸಮಾಜಕ್ಕೆ ರೋಟರಿ ಸಂಸ್ಥೆ ಕೊಡುಗೆ ಅಪಾರವಾಗಿದ್ದು ಈ ಮೂಲಕ ರೋಟರಿ ಸದಸ್ಯರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಟರಿ ಸಂಸ್ಥೆಗೆ ಸಮಾಜದಲ್ಲಿ ಜಾತಿ ಜನಾಂಗ ಮೇಲು ಕೀಳೆಂಬ ಬೇದಭಾವವಿಲ್ಲದೆ ಸಮಾಜದಲ್ಲಿ ಎಲ್ಲರು ಸಮಾನರು ಎಂಬ ಧ್ಯೇಯೋದ್ದೇಶದಿಂದ ಅಭಿವೃದ್ಧಿಗೊಳಿಸುತ್ತಿರುವ ಜತೆಯಲ್ಲಿ ಜನ ಜಾಗೃತಿಯನ್ನು ಮೂಡಿಸುತ್ತಿದೆ. ಸಮಾಜ ಬದಲಾದಂತೆ ರೋಟರಿ ಸಂಸ್ಥೆಯು ಸಮಾಜದಲ್ಲಿ ಬದಲಾವಣೆ ತರುವ ಕಾರ್ಯವನ್ನು ಮಾಡುತ್ತಿದೆ. ರೋಟರಿ ಸಂಸ್ಥೆಯು ಮಹಿಳೆಯರು ಸಮಾಜ ಸೇವೆಯಲ್ಲಿ ತೋಡಗಿಸಿಕೊಳ್ಳಲು ಅವಕಾಶ ನೀಡುತ್ತಿದ್ದು, ಈ ಮೂಲಕ ಮಹಿಳಾ ರೋಟರಿ ಸದಸ್ಯರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.

ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲ ಉಲ್ಲಾಸ್ ಕೃಷ್ಣ ಮಾತನಾಡಿ, ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ವಿಶ್ವದ ಏಕೈಕ ಸಮಾಜ ಸೇವಾ ಸಂಸ್ಥೆಯಾಗಿದೆ. ಸಂಧ್ಯಾಸುರಕ್ಷಾ ಯೋಜನೆ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಹಲವು ಯೋಜನೆಗಳ ಮೂಲಕ ನೆರವಾಗುತ್ತಿದೆ ಎಂದರು.

ರೋಟರಿ ಸಂಸ್ಥೆಯ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಎಚ್.ನಾರಾಯಣಸ್ವಾಮಿ, ನಿರ್ಗಮಿತ ಅಧ್ಯಕ್ಷ ಟಿ.ವಿ.ದಯಾನಂದ್, ನೂತನ ಕಾರ್ಯದರ್ಶಿ ಎಚ್.ಕೆ.ಕಿರಣ್ ಮಾತನಾಡಿದರು.

ಈ ಸಂದರ್ಭದಲ್ಲಿ ಹತ್ತನೆ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥೆಯ ವಲಯ ಸೇನಾನಿ ಎ.ಎಸ್.ರಾಮಣ್ಣ, ರೋಟರಿ ಮಲ್ಲೇಶ್ವರ ಸಂಸ್ಥೆಯ ಸದಸ್ಯರು, ಜಿಲ್ಲೆ ಹೊರ ಜಿಲ್ಲೆಗಳ ರೋಟರಿ ಪ್ರಮುಖರು, ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net