ನಿಸ್ವಾರ್ಥ ಸೇವೆ ರೋಟರಿ ಸಂಸ್ಥೆ ಉದ್ದೇಶ

sri sabhe
Published on

ಶೃಂಗೇರಿ: ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯದೊಂದಿಗೆ 24 ವರ್ಷಗಳಿಂದ ರೋಟರಿ ಸಂಸ್ಥೆ ಸಮಾಜದ ಹಿತಕ್ಕಾಗಿ ನಿಸ್ವಾರ್ಥ ಭಾವದಿಂದ ದುಡಿಯುತ್ತಿದೆ ಎಂದು ರೋಟರಿ ಸಂಸ್ಥೆ ನಿಯೋಜಿತ ಅಧ್ಯಕ್ಷ ಸುಬ್ರಹ್ಮಣ್ಯ ಅಂಬಲಮನೆ ಹೇಳಿದರು.

ರೋಟರಿ ಸಂಸ್ಥೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಒಳಿತಿಗಾಗಿ ಒಂದಾಗೋಣ ಎಂಬುದು ರೋಟರಿ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ. ಜಿಲ್ಲಾ ಯೋಜನೆಗಳಾದ ಶಿಕ್ಷಣ, ಪರಿಸರ, ಆರೋಗ್ಯ, ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಸಮುದಾಯದ ಜತೆ ಬೆರೆತು ಕಾರ್ಯ ನಿರ್ವಹಿಸಲಾಗುವುದು ಎಂದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜ್ಞಾನಾತ್ಮಕ ಕಾರ್ಯಗಾರದ ಜತೆಗೆ ಅಗತ್ಯ ಪರಿಕರಗಳ ನೆರವು, ಸಾರ್ವಜನಿಕರಿಗೆ ವೈದ್ಯಕೀಯ ನೆರವು, ಆರೋಗ್ಯಶಿಬಿರಗಳು, ಸ್ವಚ್ಛತಾ ಅಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೊ.ಅಭಿನಂದನ್ ಶೆಟ್ಟಿ ಸದಸ್ಯರಿಗೆ ಪ್ರಮಾಣ ವಚನ ಭೋದಿಸಲಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ, ರೋಟರಿ ಜಿಲ್ಲೆ 3182ರ ಸೇನಾನಿ ಮಹೇಶ್.ಡಿ,ನಿಯೋಜಿತ ಕಾರ್ಯದರ್ಶಿ ಪ್ರಿಯದರ್ಶಿನಿ ಭಾಗವಹಿಸಲಿದ್ದಾರೆ ಎಂದರು.

ನಿರ್ಗಮಿತ ಅಧ್ಯಕ್ಷ ಕೆ.ಸಿ.ನಾಗೇಶ್ ಮಾತನಾಡಿ, ತಾಲೂಕಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೀಡುವ ಜತೆಗೆ ಉಚಿತವಾಗಿ ಕಾನೂನಿನ ಮಾಹಿತಿ ಕುರಿತ ಪುಸ್ತಕಗಳನ್ನು ನೀಡಲಾಗಿದೆ. ಪರಿಸರ, ರಸ್ತೆ ಸುರಕ್ಷತೆ, ಆರೋಗ್ಯ ಶಿಬಿರ, ವೈದ್ಯಕೀಯ ನೆರವು ನೀಡಿ ಸಂಸ್ಥೆಯ ಉದ್ದೇಶವನ್ನು ಈಡೇರಿಸಲಾಗಿದೆ ಎಂದರು.

ರೋಟರಿ ನಿಯೋಜಿತ ಕಾರ್ಯದರ್ಶಿ ಪ್ರಿಯದರ್ಶಿನಿ, ಕಾರ್ಯದರ್ಶಿ ಸುರೇಶ್ ,ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ಭೂಮಿಕಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net