ಯುವಜನ ಸಂಘದಿAದ ನಿಸ್ವಾರ್ಥ ಸೇವೆ

28sor1
ಆನವಟ್ಟಿಯ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಆಯೋಜಿಸಿದ್ದ ಯುವ ಸಂಭ್ರಮ ಕಾರ್ಯಕ್ರಮವನ್ನು ಯುವಜನ ಸಂಘದ ಸಂಸ್ಥಾಪಕ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ಉದ್ಘಾಟಿಸಿದರು. ಬಸವನಗೌಡ ಮಲ್ಲಾಪುರ, ಸಂಪತ್ ಕುಮಾರ್, ಶಂಕರ್ ಶೇಟ್, ಪ್ರದೀಪ್ ಕುಮಾರ್ ಇತರರಿದ್ದರು.
Published on

ಸೊರಬ: ತಾಲೂಕಿನಲ್ಲಿ ಯುವ ಜನ ಸಂಘವು ನಿಸ್ವಾರ್ಥ ಸೇವಾ ಭಾವನೆಯಿಂದ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಅದು ತನ್ನದೇ ಆದ ಹಿರಿಮೆಯನ್ನು ಉಳಿಸಿಕೊಂಡು ಬಂದಿದೆ ಎಂದು ತಾಲೂಕು ಯುವಜನ ಸಂಘದ ಸಂಸ್ಥಾಪಕ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ಹೇಳಿದರು.
ಆನವಟ್ಟಿಯ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಯುವ ಜನ ಸಂಘದ ೩೦ನೇ ವರ್ಷದ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು ಪರಿಸರ ಜಾಗೃತಿ, ಹಸಿರೀಕರಣ, ವಿದ್ಯಾನಿಽ ಪ್ರೋತ್ಸಹ, ಶಾಲೆಗಳಿಗೆ ಕಲಿಕಾ ಕೌಶಲ್ಯ ಹೆಚ್ಚಿಸುವ ಚಟುವಟಿಕೆಗಳನ್ನು ೩೦ ವರ್ಷಗಳಿಂದ ನಿರಂತರವಾಗಿ ಮಾಡುತ್ತಿದೆ ಎಂದರು.
ಕಸಾಪ ಆನವಟ್ಟಿ ಹೋಬಳಿ ಘಟಕದ ಅಧ್ಯಕ್ಷ ಬಸವನಗೌಡ ಮಲ್ಲಾಪುರ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವಜನ ಸಂಘದ ಅಧ್ಯಕ್ಷ ಸಂಪತ್ ಕುಮಾರ್, ಕನ್ನಡ ಸಾಹಿತ್ಯ ಸಾಂಸ್ಕÈತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್, ತಾಪಂ ಇಒ ಡಾ.ಪ್ರದೀಪ್ ಕುಮಾರ್, ವೀರೇಶ್ ಗೌಡ, ನಾಗರಾಜ್ ಗುತ್ತಿ, ಪ್ರಕಾಶ್, ನಾಗರಾಜ್, ಚಲನಚಿತ್ರ ನಟರಾದ ನಾಗೇಶ್ವರ ವಿಜಯಪುರ, ಕಿರುತೆರೆ ನಟ ತಾಂಡವ್, ಸಂಗೀತ ಭಟ್, ಸತೀಶ್, ಆರ್.ಸಿ.ಪಾಟೀಲ್, ಶಿವಪ್ಪ ವಕೀಲ, ಖಲಂದರ್ ಸಾಬ್, ಮಲ್ಲಿಕಾರ್ಜುನ ದ್ವಾರಹಳ್ಳಿ, ಮಂಜುನಾಥ್, ಕೇಶವ್, ಅಜಿತ್ ಕುಮಾರ್, ಅಭಿಲಾಷ್ ಹುರುಳಿ ಕೊಪ್ಪ, ಶಿವಕುಮಾರ್ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net