ಕಷ್ಟಕರ ಸನ್ನಿವೇಶಗಳಲ್ಲಿ ದಾದಿಯರ ನಿಸ್ವಾರ್ಥ ಸೇವೆ

14 ckm 6
ಚಿಕ್ಕಮಗಳೂರು ಬ್ರಹ್ಮಕುಮಾರೀಸ್ ಜ್ಞಾನ ಪ್ರಕಾಶ ಭವನದಲ್ಲಿ ಅಶ್ರಯ ನರ್ಸಿಂಗ್ ಕಾಲೇಜು, ಚಿಕ್ಕಮಗಳೂರು ಇನ್ಸಿಟ್ಯೂಟ್ ಆಫ್ ಮೆಡಿಕಲ್ ನರ್ಸಿಂಗ್ ಕಾಲೇಜು ಹಾಗೂ ಬ್ರಹ್ಮಕುಮಾರೀಸ್ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರಾಷ್ಟಿçÃಯ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಕಿಮ್ಸ್ ಮೆಡಿಕಲ್ ಕಾಲೇಜು ಮುಖ್ಯಸ್ಥ ಎಚ್.ಆರ್.ಹರೀಶ್ ಉದ್ಘಾಟಿಸಿದರು. ಭಾಗ್ಯಕ್ಕ, ಡಾ. ಶುಭ ವಿಜಯ್, ಡಾ.ಲೋಹಿತ್, ವೀಣಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ವೈದ್ಯರಷ್ಟೇ ರೋಗಿಗಳನ್ನು ಶುಶ್ರೂಷೆ ಮಾಡುವವರು ದಾದಿಯರು. ಹಗಲು, ರಾತ್ರಿ ಎನ್ನದೆ, ರೋಗಿಗಳ ಸೇವೆ ಮಾಡುವ ನರ್ಸ್ಗಳ ಕಾರ್ಯ ನಿಜಕ್ಕೂ ಅಸ್ಮರಣೀಯ ಎಂದು ಕಿಮ್ಸ್ ಮೆಡಿಕಲ್ ಕಾಲೇಜು ಮುಖ್ಯಸ್ಥ ಎಚ್.ಆರ್.ಹರೀಶ್ ಹೇಳಿದರು.

ನಗರದ ಬ್ರಹ್ಮಕುಮಾರೀಸ್ ಜ್ಞಾನ ಪ್ರಕಾಶ ಭವನದಲ್ಲಿ ಅಶ್ರಯ ನರ್ಸಿಂಗ್ ಕಾಲೇಜು, ಚಿಕ್ಕಮಗಳೂರು ಇನ್ಸಿಟ್ಯೂಟ್ ಆಫ್ ಮೆಡಿಕಲ್ ನರ್ಸಿಂಗ್ ಕಾಲೇಜು ಹಾಗೂ ಬ್ರಹ್ಮಕುಮಾರೀಸ್ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತರಾಷ್ಟಿçÃಯ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾ ಟಿಸಿ ಮಾತನಾಡಿದರು.
ಎಲ್ಲಕ್ಕಿಂತ ಹೆಚ್ಚಾಗಿ ಕೊರೊನಾ ಸಮಯದಲ್ಲಿ ನರ್ಸ್ಗಳು ತಮ್ಮ ಜೀವದ ಹಂಗನ್ನು ತೊರೆದು ಸೋಂಕಿತರ ಸೇವೆ ಮಾಡಿದ್ದರು. ನಾವೆಲ್ಲರೂ ಆರೋಗ್ಯವಾಗಿರಲು ದಾದಿಯರು ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಬಹಳಷ್ಟು ಕಷ್ಟಕರ ಸನ್ನಿವೇಶಗಳಲ್ಲಿ ದಾದಿಯರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದರು.
ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಮಾತನಾಡಿ ಪ್ರತಿವರ್ಷ ಮೇ ೧೨ರಂದು ದಾದಿಯರ ಅಂಗವಾಗಿ ಕಾರ್ಯಕ್ರಮ ಆಚರಿಸಲಾಗಿದ್ದು, ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ತನ್ನದೇ ಕೊಡುಗೆ ನೀಡಿದ ವಿಶ್ವ ವಿಖ್ಯಾತ ನರ್ಸ್ ಫ್ಲಾರೆನ್ಸ್ ನೈಟಿಂಗೇಲ್ ಅವರ ದಿನವನ್ನು ಪ್ರತಿ ವರ್ಷ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಯುದ್ಧದಲ್ಲಿ ಗಾಯಗೊಂಡ ಸೇನಾನಿಗಳ ಆರೈಕೆ ಮಾಡಿ ಜಗತ್ತಿನಾದ್ಯಂತ ಗೌರವ ಪಡೆದ ನೈಟಿಂಗೇಲ್ ವೃತ್ತಿ ಘನತೆಯನ್ನು ಎತ್ತಿಹಿಡಿದ ಅನುಭವಿ ದಾದಿ. ಲಂಡನ್‌ನ ಪ್ರಮುಖ ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸಲ್ಲಿಸಿದ ಅವರು ಮಾನವೀಯತೆಯ ಪ್ರತಿಪಾದಕರಾಗಿ ಪ್ರಸಿದ್ಧಿ ಹೊಂದಿದ್ದರು ಎಂದರು.
ಆಶ್ರಯ ಆಸ್ಪತ್ರೆ ಸ್ತಿçÃರೋಗ ತಜ್ಞೆ ಡಾ. ಶುಭ ವಿಜಯ್ ಮಾತನಾಡಿ, ನೈಟಿಂಗೇಲ್ ಸಮಾಜ ಸುಧಾರಕಿ ಹಾಗೂ ಸಂಖ್ಯಾ ಶಾಸ್ತçಜ್ಞರಾಗಿ ಗುರುತಿಸಿಕೊಂಡಿದ್ದರು. ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಅವರು ನೀಡಿದ ಕೊಡುಗೆ ಅಪಾರವಾದುದು ಎಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ಲಾರೆನ್ ನೈಟಿಂಗೇಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಿದರು. ರಾಜಯೋಗ ಶಿಕ್ಷಕಿ ರೇಖಾ ದಾದಿಯರ ದಿನಾಚರಣೆ ಕುರಿತು ನರ್ಸಿಂಗ್ ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಿಮ್ಸ್ ಮೆಡಿಕಲ್ ಕಾಲೇಜಿನ ವೈದ್ಯ ಡಾ.ಲೋಹಿತ್, ಬ್ರಹ್ಮಕುಮಾರೀಸ್ ಸಂಸ್ಥೆ ಹಾಸನ ಸಂಚಾಲಕಿ ವೀಣಾ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net