ವೈದ್ಯರ ನಿಸ್ವಾರ್ಥ ಸೇವೆ ಅನನ್ಯ

KDR doctor
ಕಡೂರಿನಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ವೈದ್ಯರಾದ ವಾಸುದೇವಮೂರ್ತಿ, ಜಗದೀಶ್, ಟೀಕಪ್ಪ, ಪ್ರದೀಪ್ ಇತರರಿದ್ದರು.
Published on

ಕಡೂರು: ದೇವರ ರೂಪದಲ್ಲಿ ನಿಸ್ವಾರ್ಥ ಸೇವೆ ಮತ್ತು ಸಮುದಾಯಗಳ ಆರೋಗ್ಯ, ಯೋಗಕ್ಷೇಮ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುವ ವೈದ್ಯರ ಸೇವೆ ಅನನ್ಯವಾದದ್ದು ಎಂದು ಶಾಸಕ ಕೆ.ಎಸ್.ಆನಂದ್ ಬಣ್ಣಿಸಿದರು.

ಪಟ್ಟಣ ಸಮೀಪದ ಕಡೂರು-ಬೀರೂರು ಭಾರತೀಯ ವೈದ್ಯಕೀಯ ಸಂಘದಿಂದ (ಐಎಂಎ)ಭಾನುವಾರ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾಯಿ ನಂತರದ ಸ್ಥಾನವನ್ನು ವೈದ್ಯರಿಗೆ ನೀಡಲಾಗಿದೆ ಎಂದರು.
ಕರೊನಾದಂಥ ಮಾರಕ ರೋಗ ಬಂದಾಗಲೂ ವೈದ್ಯರು ಜೀವದ ಹಂಗು ತೊರೆದು ಚಿಕಿತ್ಸೆ ನೀಡಿದರು. ಕಡೂರಿನ ಅನೇಕ ವೈದ್ಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಸೇವೆ ಶ್ಲಾಸಲೇಬೇಕು ಎಂದರು.
ವೈದ್ಯರ ಮೇಲೆ ಯಾರೂ ಹಲ್ಲೆ ನಡೆಸಬಾರದು. ವೈದ್ಯರನ್ನು ವಿಶ್ವಾಸ, ಪ್ರೀತಿಯಿಂದ ಕಾಣಬೇಕು. ಕಡೂರು-ಬೀರೂರು ಐಎಂಎಗೆ ಉತ್ತಮ ಸಭಾಂಗಣ ಇದೆ. ಇತರ ಸಮಾರಂಭಗಳನ್ನು ಮಾಡಲು ಮತ್ತಷ್ಟು ಕಟ್ಟಡ ನಿರ್ಮಾಣದ ಅವಶ್ಯಕತೆಯ ಬಗ್ಗೆ ಮನವಿ ಸಲ್ಲಿಸಿದ್ದಾರೆ. 25 ಲಕ್ಷ ರೂಪಾಯಿ ಅನುದಾನ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ವೈದ್ಯಾಧಿಕಾರಿ ಡಾ. ಅಶ್ವತ್ಥ್‌ಬಾಬು ಮಾತನಾಡಿ, ಕಾಲ ಬದಲಾದಂತೆ ವೈದ್ಯ ಸೇವೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ. ಈ ನಿಟ್ಟಿನಲ್ಲಿ ನಮ್ಮಲ್ಲಿನ ವೃತ್ತಿ ಬದ್ಧತೆ ಮತ್ತಷ್ಟು ಹೆಚ್ಚಿಸಿಕೊಂಡು ಕಾರ್ಯೋನ್ಮುರಾಗಬೇಕು ಎಂದರು.
ಕಡೂರು-ಬೀರೂರು ಐಎಂಎ ಅಧ್ಯಕ್ಷ ಡಾ. ಎಚ್.ಎಸ್.ವಾಸುದೇವಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಉತ್ತಮವಾಗಿ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಶಾಸಕರು ನಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದಾರೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ತಾಲೂಕಿನ ವೈದ್ಯರು ಶ್ರಮಿಸುತ್ತೇವೆ ಎಂದು ಹೇಳಿದರು.
ಹಿರಿಯ ವೈದ್ಯ ಎಂ.ಡಿ.ಟೀಕಪ್ಪ ಮಾತನಾಡಿ, 38 ವರ್ಷಗಳ ಹಿಂದೆ ಆರಂಭವಾದ ಕಡೂರು-ಬೀರೂರು ಐಎಂಎ ಬೃಹತ್ ಕಟ್ಟಡ ಹೊಂದಿದ್ದು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಎಲ್ಲ ವೈದ್ಯರ ಸಹಕಾರ, ಸಲಹೆಯಿಂದ ಇದು ಸಾಧ್ಯವಾಗಿದೆ ಎಂದರು.
ವೈದ್ಯರಾದ ಪ್ರದೀಪ್, ಕೆ.ಟಿ.ಜಗದೀಶ್, ಎನ್.ಚಂದ್ರಶೇಖರ್, ಎಸ್.ಸಿ.ರವಿಕುಮಾರ್, ದಿನೇಶ್, ಶಿವಕುಮಾರ್, ದೀಪಕ್ ವಾಡಿಲಾಲ್, ದೀಪಕ್, ಪ್ರಭು, ಬಸವಂತಪ್ಪ, ವಿಜಯ್‌ಕುಮಾರ್, ಶ್ರೀನಿವಾಸಮೂರ್ತಿ, ಕೆಂಚೇಗೌಡ, ಮಧು, ಭರತ್, ರೂಪಾ ಶಿವಕುಮಾರ್, ಚಂದಾ ದೀಪಕ್, ಪೂರ್ಣಿಮಾ ದಿನೇಶ್, ಜ್ಯೋತಿ ಹಾಗೂ ಸ್ನೇಹಕೂಟದ ಸ್ವಾತಿ ದೀಪಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net