ನಾಡಗೌಡ ಮನೆತನದಿಂದ ನಿಸ್ವಾರ್ಥ ಸೇವೆ

Selfless service from the Nadagouda family
Published on

ತೇರದಾಳ:ಪ್ರತಿಷ್ಠಿತ ನಾಡಗೌಡರ ಮನೆತನ ಅವಳಿ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದಲ್ಲಿಯೇ ಖ್ಯಾತಿಪಡೆದಿದೆ. ನಿಸ್ವಾರ್ಥ ಮನೋಭಾವದಿಂದ ಸದಾ ಜನ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇರ್ಪಡೆ ಬಿಜೆಪಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು. ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಪ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಹಿರಿಯ ಮುಖಂಡ ಪ್ರವಿಣ ನಾಡಗೌಡ ಅವರಿಗೆ ಧ್ವಜ ಹಸ್ತಾಂತರಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿ ಮತ್ತು ಜನರ ಕಲ್ಯಾಣದ ಶ್ರಮದ ಮೂಲಕ ಪ ಸಂಟಿಸುವ ಕಾರ್ಯ ಮಾಡಿರುವುದು ನಮಗೆಲ್ಲ ಮಾರ್ಗದರ್ಶಿಯಾಗಿದೆ. ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಕುಡಚಿ& ಬಾಗಲಕೋಟೆ ರೈಲ್ವೆ ಯೋಜನೆಗೆ ಬೇಕಾದಷ್ಟು ಹಣ ಕೇಂದ್ರದಲ್ಲಿ ಇದೆ. ಆದರೆ ರೈತರ ಜಮೀನು ಪಡೆದುಕೊಳ್ಳುವ ಕ್ರಮವು ವಿಳಂಬಕ್ಕೆ ಕಾರಣವಾಗಿದೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ನಾಡಗೌಡ ಮನೆತನದ ಇಬ್ಬರು ಬಿಜೆಪಿಗೆ ಸೇರ್ಪಡೆಯಾಗಿರುವುದು ಡಬಲ್​ ಧಮಾಕಾ ಪಕ್ಷಕ್ಕೆ ಸಿಕ್ಕಿದೆ. ೇತ್ರದ ಮುಖಂಡರಾಗಿ ತಮ್ಮ ಮಾರ್ಗದರ್ಶನ ಪಡೆಯುತ್ತೇವೆ. ಎಲ್ಲಾ ಕಾರ್ಯಕರ್ತ ಹಿರಿಯರು ಕೂಡ ಅದೇ ಮಾರ್ಗದಲ್ಲಿ ನಡೆಯಬೇಕು. ೇತ್ರದಲ್ಲಿ ಚರ್ಚೆಗಳು ಆರಂಭವಾಗಿದ್ದು, ಕಾಂಗ್ರೆಸ್​ನಿಂದ ಸಾವಿರಾರು ಜನ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿಗೆ ಬರಲಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಪ್ರವಿಣ ನಾಡಗೌಡ ಮಾತನಾಡಿ, ಯಾವುದೇ ಅಧಿಕಾರ ಆಸೆ ಇಟ್ಟುಕೊಳ್ಳದೇ ಸಾಮಾನ್ಯ ಕಾರ್ಯಕರ್ತನಾಗಿ ಪ ಬೆಳೆಸುವ ನಿಟ್ಟಿನಲ್ಲಿ ಪದ ದೃಢ ಸಂಕಲ್ಪ ಈಡೇರಿಸುವ ಸದಾಭಿಪ್ರಾಯ ನಮ್ಮದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಢ ನಿರ್ಧಾರದ ದೇಶವ್ಯಾಪಿ ಕೆಲಸ&ಕಾರ್ಯಗಳ ಮೂಲಕ ಪಕ್ಕೆ ಬರಲು ಕಾರಣವಾಯಿತು ಎಂದರು.

ಜಮಖಂಡಿ ಶಾಸಕ ನಾಡೋಜ ಜಗದೀಶ ಗುಡಗುಂಟಿ, ವಿಜಯ ಮಹಾಂತೇಶ ನಾಡಗೌಡ, ಸುರೇಶ ಅಕ್ಕಿವಾಟ, ಮಹಾವೀರ ಕೊಕಟನೂರ, ಪ್ರಭಾಕರ ಭಾಗಿ, ಡಿ.ಆರ್​. ಪಾಟೀಲ, ಪುಂಡಲಿಕ ಪಾಲಬಾಂವಿ, ಬಾಬಾಗೌಡ ಪಾಟೀಲ, ನಾಗಪ್ಪ ಸನದಿ ಇತರರು ಇದ್ದರು.

ತೇರದಾಳ ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರವಿಣ ನಾಡಗೌಡ ಬಿಜೆಪಿಗೆ ಸೇರ್ಪಡೆಗೊಂಡರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ, ನಾಡೋಜ ಜಗದೀಶ ಗುಡಗುಂಟಿ, ವಿಜಯಮಹಾಂತೇಶ ನಾಡಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net