ನಿಸ್ವಾರ್ಥ ಸೇವೆಯಿಂದ ಸಂಸ್ಥೆಯ ಏಳಿಗೆ

13Anand6
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ಎಸ್.ಸಿ ಧಾರವಾಡ ಮಾತನಾಡಿದರು. ಡಾ.ಎಮ್.ಎ ಉಡಚನಕರ, ಡಾ.ವಿಕ್ರಾಂತ ನೇಸರಿ, ಡಾ.ಎಮ್.ಎಸ್ ಕಡ್ಡಿ .ಡಾ.ಆರ್.ಜಿ ನೆಲವಿಗಿ ಇತರರಿದ್ದರು.
Published on

ಬೆಳಗಾವಿ: ನಿಸ್ವಾರ್ಥತೆಯ ಸೇವಾಮನೋಭಾವದಿಂದ ಸಂಸ್ಥೆಯ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬುವುದಕ್ಕೆ ಕೆಎಲ್‌ಇ ಸಂಸ್ಥೆಯ ಬೆಳವಣಿಗೆಯೇ ಸಾಕ್ಷಿ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ ಧಾರವಾಡ ಹೇಳಿದರು.

ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಡಿಮೆ ಸಂಸ್ಥೆಗಳನ್ನು ಹೊಂದಿದ್ದ ಸಂಸ್ಥೆಯು ಇಂದು 310ಕ್ಕೂ ಅಧಿಕ ಅಂಗ ಸಂಸ್ಥೆಗಳನ್ನು ಹೊಂದಿದೆ. ಇದು ಸಂಸ್ಥೆಯ ಇಂದಿನ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಅಲ್ಲದೆ ಸಪ್ತರ್ಷಿಗಳಾದ ಎಸ್.ಎಸ್.ಬಸವನಾಳ, ಎಮ್.ಆರ್.ಸಾಖ್ರೆ, ಬಿ.ಬಿ.ಮಮದಾಪೂರ, ಹೆಚ್.ಎ್.ಕಟ್ಟಿಮನಿ, ಪಿ.ಆರ್.ಚಿಕ್ಕೋಡಿ, ಬಿ.ಎಸ್.ಹಂಚಿನಾಳ, ವಿ.ವಿ.ಪಾಟೀಲ ಸಾಮಾಜಿಕ ಚಿಂತನೆ ಹಾಗೂ ಮುಂದಾಲೋಚನೆ ಲ ಕೆಎಲ್‌ಇ ಸಂಸ್ಥೆಯು ಹುಟ್ಟಿ ಹೆಮ್ಮರವಾಗಿ ಬೆಳೆದಿದೆ ಎಂದರು. ಹೋಮಿಯೋಪಥಿಕ ಕಾಲೇಜಿನ ಪ್ರಾಂಶುಪಾಲ್ ಡಾ.ಎಂ.ಎ ಉಡಚನಕರ ಮಾತನಾಡಿ, ಶಿಕ್ಷಣ ದಾಸೋಹದ ಸದುದ್ದೇಶದಿಂದ ಪ್ರಾರಂಭಗೊಂಡ ಸಂಸ್ಥೆಯು ಇಂದು ಶಿಕ್ಷಣ, ವೈದ್ಯಕೀಯ ಶಿಕ್ಷಣ, ಕಷಿ, ತಾಂತ್ರಿಕ ಶಿಕ್ಷಣ ಹಾಗೂ ಸಂಶೋಧನೆಗಳಲ್ಲಿ ವಿಶ್ವವೇ ನಮ್ಮ ಕರ್ನಾಟಕದತ್ತ ಹಿಂತಿರುಗಿ ನೋಡುವಂತೆ ಮಾಡಿದೆ ಎಂದು ಹೇಳಿದರು. ಡಾ.ವಿಕ್ರಾಂತ ನೇಸರಿ, ಡಾ.ಎಂ.ಎಸ್ ಕಡ್ಡಿ .ಡಾ.ಆರ್.ಜಿ ನೆಲವಿಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net