ನಿಸ್ವಾರ್ಥ ಸೇವೆಯಿಂದ ಸಂಘಟನೆ ಬೆಳವಣಿಗೆ

23 DVD 08
ದೇವದುರ್ಗದಲ್ಲಿ ಆಯೋಜಿಸಿದ್ದ ಪ್ರತಿಭಾ ಅನ್ವೇಷಣೆ ಹಾಗೂ ಸನ್ಮಾನ ಸಮಾರಂಭವನ್ನು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ್ ಉದ್ಘಾಟಿಸಿದರು. ಜಾಲಹಳ್ಳಿಯ ಜಗದಾರಾಧ್ಯ ಜಯಶಾಂತ ಲಿಂಗೇಶ್ವರ ಸ್ವಾಮೀಜಿ, ಸುಲ್ತಾನಪುರದ ಶಂಭು ಸೋಮನಾಥ ಸ್ವಾಮೀಜಿ, ಜಹೀರುದ್ದೀನ್ ಪಾಷಾ ತಾತ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಭಾನುಪ್ರಕಾಶ ಖೇಣೇದ್, ವೀರೇಶ ವಕೀಲ, ಎಚ್.ಶಿವರಾಜ ಇತರರಿದ್ದರು.
Published on

ದೇವದುರ್ಗ: ಯಾವುದೇ ಸಂಘಟನೆ ನಿಸ್ವಾರ್ಥ ಸೇವೆ ಹಾಗೂ ಪರಿಶ್ರಮದಿಂದ ಕೆಲಸ ಮಾಡಿದರೆ ಮಾತ್ರ ಸಮಾಜದಲ್ಲಿ ಗುರುತಿಸಿಕೊಂಡು ಬೆಳವಣಿಗೆ ಹೊಂದಲು ಸಾಧ್ಯ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಸುಭಾಶ್ಚಂದ್ರ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಜಯ ಕರ್ನಾಟಕ ಸಂಘಟನೆ ಕಚೇರಿ ಉದ್ಘಾಟನೆ ನಿಮಿತ್ತ ಆಯೋಜಿಸಿದ್ದ ಪ್ರತಿಭಾ ಅನ್ವೇಷಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು. ಕನ್ನಡ ಪರ ಸಂಘಟನೆಗಳು ನೆಲ, ಜಲ, ನಾಡು ನುಡಿಗೆ ಸದಾಕಾಲ ಕೆಲಸ ಮಾಡುತ್ತಿವೆ.

ಅದರಲ್ಲಿ ಜಯ ಕರ್ನಾಟಕ ಸಂಘಟನೆಯೂ ಒಂದಾಗಿದೆ. ಕನ್ನಡಪರ ಸಂಘಟನೆಗಳು ಸಾಹಿತ್ಯಕ್ಕೆ ಸದಾ ಬೆನ್ನೆಲುಬಾಗಿವೆ. ಇಂದು ನೂರಾರು ಸಂಘಟನೆಗಳು ಹುಟ್ಟಿಕೊಂಡರೂ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ, ಸಮಾಜಮುಖಿ ಕೆಲಸ ಮಾಡುವ ಸಂಘಗಳು ಮಾತ್ರ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ್, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಭಾನುಪ್ರಕಾಶ ಖೇಣೇದ್, ವೀರೇಶ ವಕೀಲ, ಮಾಧವರಾವ್ ಯು., ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಕೃಷ್ಣಕುಮಾರ ಮಡಿವಾಳ, ಎಚ್.ಶಿವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net