

ಎನ್.ಆರ್.ಪುರ: ಸ್ವಾವಲಂಬಿ ಬದುಕಿನಲ್ಲಿ ಮಹಿಳೆಯರಿಗೆ ಆತ್ಮತೃಪ್ತಿ ಸಿಗಲಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಭಾಗ್ಯಾ ನಂಜುಂಡಸ್ವಾಮಿ ತಿಳಿಸಿದರು.
ಮಹಾವೀರ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರ, ಜಿಲ್ಲಾ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಆಶ್ರಯದಲ್ಲಿ ಸ್ವ ಉದ್ಯೋಗ ಶಿಬಿರ ಹಾಗೂ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಉದ್ಯೋಗದಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು.
ಕೊಪ್ಪ , ಎನ್.ಆರ್.ಪುರ ತಾಲೂಕುಗಳ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ರಂಜಿತಾ ಮಾತನಾಡಿ, ಜ್ಞ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿಶೇಷವಾಗಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ಆಯೋಜನೆ ಮಾಡಿ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ರುುಡ್‌ಸೆಟ್ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಪಪಂ ಸದಸ್ಯೆ ಜುಬೇದಾ ಮಾತನಾಡಿದರು. ಕೊಪ್ಪದ ಪ್ರಗತಿಪರ ಕೃಷಿ ಉತ್ಪನ್ನ ತರಬೇತುದಾರರಾದ ಸುಮಾ ರಂಗಪ್ಪ, ಸ್ವ ಉದ್ಯೋಗದ ಕುರಿತು ಮಾಹಿತಿ ನೀಡಿದರು. ಚಿಕ್ಕಮಗಳೂರು ರುಡ್‌ಸೆಟ್ ಸಂಸ್ಥೆ ಉಪನ್ಯಾಸಕ ರವಿಚಂದ್ರನ್ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಕೈಗೊಳ್ಳಬಹುದಾದ ಸ್ವಉದ್ಯೋಗದ ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ಅಭಿವೃದ್ಧಿ ಅಧಿಕಾರಿ ಪ್ರತಾಪ್ ಅವರು ಬ್ಯಾಂಕ್‌ನಿಂದ ಸ್ವಉದ್ಯೋಗಕ್ಕೆ ಸಿಗುವ ಸೌಲಭ್ಯಗಳನ್ನು ತಿಳಿಸಿದರು. ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರದ ಮೇಲ್ವಿಚಾರಕಿ ರಂಜಿತಾ ಮಾಹಿತಿ ನೀಡಿದರು. ಸಾಹಿತ್ಯ ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಅರ್ಚನಾ ಬ್ಯಾಗ್ ತಯಾರಿಸುವ ತರಬೇತಿ ನೀಡಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರೊಂದಿಗೆ ಸಂವಾದ ನಡೆಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಸಿದ್ದಲಿಂಗಪ್ಪ, ಸೇವಾ ಪ್ರತಿನಿಧಿ ಸುನಿತಾ, ಸಂಘದ ಸದಸ್ಯರು ಇದ್ದರು.